ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ದಾಖಲೆಯ ಶೇ.77.15 ಮತದಾನ

Update: 2024-04-27 14:04 GMT

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಸ್ಥಾನಕ್ಕಾಗಿ ಶುಕ್ರವಾರ ನಡೆದ ಮತದಾನದ ವೇಳೆ ಕ್ಷೇತ್ರದಲ್ಲಿ ಶೇ.77.15ರಷ್ಟು ಮತದಾನವಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ. ಕ್ಷೇತ್ರದ ಮಟ್ಟಿಗೆ ಇದೊಂದು ದಾಖಲೆಯ ಮತದಾನವಾಗಿದೆ.

ಜಿಲ್ಲಾವಾರು ಸಾಧನೆ ಗಮನಿಸಿದರೆ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.78.94ರಷ್ಟು ಮತದಾನವಾಗಿದೆ. ಅದೇ ರೀತಿ ಚಿಕ್ಕಮಗಳೂರಿನ ನಾಲ್ಕು ವಿಧಾನಸಭಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಮತದಾನ ಶೇ.75.7 ಆಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.76.06ರಷ್ಟು ಮತದಾನವಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ.1.1ರಷ್ಟು ಅಧಿಕ ಮತದಾನವಾಗಿದೆ.

ಚುನಾವಣಾ ಆಯೋಗ ಪ್ರಕಟಿಸಿರುವ ಅಧಿಕೃತ ಮಾಹಿತಿಯಂತೆ ಕ್ಷೇತ್ರದ ಒಟ್ಟು 15,85,162 ಮತದಾರರಲ್ಲಿ 12,22,888 ಮಂದಿ ನಿನ್ನೆ ಮತ ಚಲಾಯಿಸಿದ್ದಾರೆ. ಕ್ಷೇತ್ರದ 7,68,215 ಪುರುಷ ಮತದಾರರಲ್ಲಿ 5,94,565 ಮಂದಿ ಹಾಗೂ 8,16,910 ಮಹಿಳಾ ಮತದಾರರಲ್ಲಿ 6,28,316 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಶೇ.77.39ರಷ್ಟು ಪುರುಷರು ಮತ ಚಲಾಯಿಸಿದ್ದರೆ, ಶೇ.76.95ರಷ್ಟು ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕ್ಷೇತ್ರದಲ್ಲಿರುವ 37 ತೃತೀಯ ಲಿಂಗಿ ಮತದಾರರಲ್ಲಿ ಕೇವಲ ಏಳು ಮಂದಿ ಮಾತ್ರ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಈ ಮಾಹಿತಿ ತಿಳಿಸುತ್ತದೆ. ಕುಂದಾಪುರ ಮತ್ತು ತರೀಕೆರೆಯಲ್ಲಿ ತಲಾ ಒಬ್ಬರು, ಕಾಪು, ಶೃಂಗೇರಿ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಒಬ್ಬರು ತಮ್ಮ ಮತ ಚಲಾಯಿಸಿದ್ದಾರೆ. ಇವರ ಮತದಾನದ ಪ್ರಮಾಣ ಶೇ.18.91ಆಗಿದೆ.

ಈ ಬಾರಿ ಗರಿಷ್ಠ ಮತದಾನದ ದಾಖಲೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಅಲ್ಲಿ ಶೇ 80.31ರಷ್ಟು ಮತದಾನ ದಾಖಲಾಗಿದ್ದರೆ, ಕನಿಷ್ಠ ಮತದಾನದ ದಾಖಲೆ ಚಿಕ್ಕಮಗಳೂರು ಕ್ಷೇತ್ರಕ್ಕೆ ಸಲ್ಲುತ್ತದೆ. ಅಲ್ಲಿ ಶೇ.70.73ರಷ್ಟು ಮಂದಿ ಮಾತ್ರ ಮತ ಚಲಾಯಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಈ ಬಾರಿಯ ಕನಿಷ್ಠ ಉಡುಪಿ ಕ್ಷೇತ್ರದಲ್ಲಿ -ಶೇ.77.84- ದಾಖಲಾಗಿದೆ. ಉಳಿದಂತೆ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.79.66, ಕುಂದಾಪುರದಲ್ಲಿ 79.12, ಕಾಪುವಿನಲ್ಲಿ ಶೇ.79.17ರಷ್ಟು ಮತದಾನ ವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಯಲ್ಲಿ ಶೇ.77.47, ತರೀಕೆರೆಯಲ್ಲಿ 74.29ರಷ್ಟು ಮತದಾನವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಎಲ್ಲಾ ಕ್ಷೇತ್ರಗಳಲ್ಲೂ ಅಧಿಕ ಮತದಾನವಾಗಿದೆ.

ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಒಟ್ಟು 2,11,838 ಮತದಾರರ ಪೈಕಿ 1,67,612 ಮಂದಿ ಮತದಾನ ಮಾಡಿದ್ದರೆ, ಉಡುಪಿ ಕ್ಷೇತ್ರದ 2,21,285 ಮತದಾರರಲ್ಲಿ 1,72,257 ಮಂದಿ ಮತ ಚಲಾಯಿಸಿದ್ದಾರೆ. ಕಾಪು ಕ್ಷೇತ್ರದ 1,92,599 ಮಂದಿಯಲ್ಲಿ 1,52,477 ಮಂದಿ, ಕಾರ್ಕಳ ಕ್ಷೇತ್ರದ 1,93,512 ಮಂದಿಯಲ್ಲಿ 1,54,1545 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಇನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದಲ್ಲಿದ್ದ 1,65,498 ಮಂದಿ ಮತದಾರರಲ್ಲಿ 1,30,509 ಮಂದಿ, ಮೂಡಿಗೆರೆಯ 1,71,642 ಮಂದಿಯಲ್ಲಿ 1,32,975 ಮಂದಿ, ಚಿಕ್ಕಮಗಳೂರು ಕ್ಷೇತ್ರದ 2,32,210 ಮಂದಿ ಮತದಾರರ ಪೈಕಿ 1,64,253ಮಂದಿ ಹಾಗೂ ತರೀಕೆರೆ ಕ್ಷೇತ್ರದ 1,93,125 ಮಂದಿ ಮತದಾರ ರಲ್ಲಿ 1,43,482 ಮಂದಿ ತಮ್ಮ ಮತವನ್ನು ಚಲಾಯಿಸಿದ್ದಾರೆ.

ಪ್ರತಿ ಕ್ಷೇತ್ರದಲ್ಲಿ ಪುರುಷ ಮತ್ತು ಮಹಿಳೆಯರು ಮತದಾನ ಮಾಡಿದ ಪ್ರಮಾಣ

ಕುಂದಾಪುರ: ಪುರುಷರು: 101,904(ಮತ ಚಲಾಯಿಸಿದವರು 79,132) ಮಹಿಳೆಯರು: 1,09,932(88,478), ಇತರೇ: 02(02), ಒಟ್ಟು: 2,11,838 (1,67,612),ಶೇ. 79.12.

ಉಡುಪಿ: ಪುರುಷರು:1,06,680(82,602),ಮಹಿಳೆಯರು: 1,14,603 (89,655), ಇತರೇ: 02(0), ಒಟ್ಟು: 2,21,285 (1,72,257), ಶೇ.77.84.

ಕಾಪು: ಪುರುಷರು: 92,290(71,586), ಮಹಿಳೆಯರು: 1,00,304 (80,890), ಇತರೇ: 5(1), ಒಟ್ಟು: 1,92,599 (1,52,477), ಶೇ. 79.17.

ಕಾರ್ಕಳ: ಪುರುಷರು: 92,864 (73,352), ಮಹಿಳೆಯರು: 1,00,648 (80,802), ಇತರೇ: 0(0), ಒಟ್ಟು: 1,93,512(1,54,154), ಶೇ. 79.66.

ಶೃಂಗೇರಿ: ಪುರುಷರು: 82,260(67,146), ಮಹಿಳೆಯರು: 86,690 (68,531), ಇತರೇ: 01(1), ಒಟ್ಟು: 1,68,951(1,35,678), ಶೇ. 80.31.

ಮೂಡಿಗೆರೆ: ಪುರುಷರು: 83,298 (66,251), ಮಹಿಳೆಯರು: 88,339 (66,724), ಇತರೇ: 05(0), ಒಟ್ಟು: 1,71,642 (1,32,975), ಶೇ. 77.47.

ಚಿಕ್ಕಮಗಳೂರು: ಪುರುಷರು: 1,13,854(81,895), ಮಹಿಳೆಯರು: 1,18,336(82,357), ಇತರೇ: 20(1), ಒಟ್ಟು: 2,32,210 (1,64,253), ಶೇ.70.73.

ತರೀಕೆರೆ: ಪುರುಷರು: 95,065 (72,601), ಮಹಿಳೆಯರು: 98,058 (70,879), ಇತರೇ: 2(2), ಒಟ್ಟು:1,93,125 (1,43,482), ಶೇ. 74.29.

ಕ್ಷೇತ್ರದ ಸಾಧನೆ: ಪುರುಷರು:7,68,215 (5,94,565 ಶೇ.77.39), ಮಹಿಳೆಯರು: 8,16,910 (6,28,316-76.95), ಇತರೇ: 37 (07), ಒಟ್ಟು: 15,85,162 (12,2,888), ಸರಾಸರಿ ಮತದಾನ: ಶೇ. 77.15.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News