ಜು.21ರಂದು ಸಚಿವ ಯುಟಿ ಖಾದರ್ ಬಾರಕೂರಿಗೆ ಭೇಟಿ
Update: 2026-07-20 19:38 IST
ಉಡುಪಿ, ಜು.20:ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಜು.21ರ ಬೆಳಗ್ಗೆ ಬಾರಕೂರು ಹಾಗೂ ಕುಂದಾಪುರಗಳಿಗೆ ಭೇಟಿ ನೀಡಿದ ಬಳಿಕ ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೆ ತೆರಳಲಿದ್ದಾರೆ.
ಮಂಗಳವಾರ ಬೆಳಗ್ಗೆ 8:45ಕ್ಕೆ ಬಾರಕೂರಿಗೆ ಆಗಮಿಸುವ ಸಚಿವರು ಅಲ್ಲಿನ ಮಲ್ಲಿಕ್ ದಿನಾರ್ ಮಸೀದಿ, ಸೈಂಟ್ ಪೀಟರ್ಸ್ ಚರ್ಚ್, ಪಂಚಲಿಂಗೇಶ್ವರ ದೇವಸ್ಥಾನ, ಕತ್ತಲೆ ಬಸದಿ ಹಾಗೂ ಕಲ್ಚಪ್ರಗಳನ್ನು ವೀಕ್ಷಿಸಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಕುಂದಾಪುರಕ್ಕೆ ತೆರಳಿ ಅಲ್ಲಿಂದ ಕುಮಟಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.