3.74ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು
Update: 2025-06-20 20:01 IST
ಅಜೆಕಾರು, ಜೂ.20: ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸತೀಶ್ ಎಂಬವರ ಮೊಬೈಲ್ ನಂಬ್ರದ ಟೆಲಿಗ್ರಾಂ ಖಾತೆಗೆ ಮೇ 22ರಂದು ಪಾರ್ಟ್ ಟೈಮ್ ಜಾಬ್ ಬಗ್ಗೆ ಸಂದೇಶ ಬಂದಿದ್ದು, ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ತಿಳಿಸಲಾಗಿತ್ತು. ಅದರಂತೆ ಆರೋಪಿ ಗಳು ಹೇಳಿದಂತೆ ಸತೀಶ್ ತನ್ನ ಖಾತೆಯಿಂದ 3,74,114ರೂ.ವನ್ನು ವರ್ಗಾವಣೆ ಮಾಡಿದರು. ನಂತರ ಆರೋಪಿಗಳು ಹಣ ನೀಡದೆ ವಂಚನೆ ಮಾಡಿರುವುದಾಗಿ ದೂರಲಾಗಿದೆ.