×
Ad

6,730 ವಿದ್ಯಾರ್ಥಿಗಳಿಗೆ 40 ಲಕ್ಷ ರೂ. ಮೌಲ್ಯದ ಪರಿಕರಗಳ ವಿತರಣೆ

Update: 2023-08-22 20:18 IST

ಉಡುಪಿ, ಆ.22: ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯು ತನ್ನ ಸಿಎಸ್‌ಆರ್ ಕಾರ್ಯಕ್ರಮಗಳನ್ನು ನಿರ್ವಹಿಸುವ ಅಂಗ ಸಂಸ್ಥೆಯಾದ ಅದಾನಿ ಫೌಂಡೇಷನ್ ಮೂಲಕ ಕಾಪು ತಾಲೂಕಿನಲ್ಲಿ 78 ಸರಕಾರಿ, ಸರಕಾರಿ ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ 6,730 ವಿದ್ಯಾರ್ಥಿಗಳಿಗೆ ಒಟ್ಟು 40 ಲಕ್ಷ ರೂ. ಮೌಲ್ಯದ ಶಿಕ್ಷಣ ಪರಿಕರಗಳನ್ನು 2023-24 ಶೈಕ್ಷಣಿಕ ಸಾಲಿನಲ್ಲಿ ವಿತರಿಸಿದೆ.

ಅದಾನಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಶಾಲೆಗಳಿಗೆ ತೆರಳಿ ಸಾಂಕೇತಿಕವಾಗಿ ಪರಿಕರಗಳನ್ನು ವಿತರಿಸಿದರು. ವಿತರಿಸಿದ ಪರಿಕರಳಲ್ಲಿ ಆಯಾ ತರಗತಿಯ ವಿದ್ಯಾರ್ಥಿಗಳಿಗೆ ಅನುಗುಣವಾಗುವಂತೆ ನೋಟ್ ಪುಸ್ತಕಗಳು, ರೆಕಾರ್ಡ್ ಪುಸ್ತಕ, ಜಿಯೊಮೆಟ್ರಿ ಬಾಕ್ಸ್, ಬ್ಯಾಗ್‌ಗಳ ಜೊತೆಗೆ ಕೊಡೆಗಳು ಒಳಗೊಂಡಿವೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News