ಕಾರ್ಕಳ, ಅ.5: ಕಾರ್ಕಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ನಾಲ್ಕು ಪ್ರಕರಣಗಳಲ್ಲಿ ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ಎಸಿಜೆ ಮತ್ತು ಜೆಎಂಎಫ್‌ಇಸಿ ನ್ಯಾಯಾಲಯದ ನಾಲ್ಕು ಪ್ರಕರಣಗಳ ವಾರೆಂಟ್ ಆರೋಪಿ ಶಿವಮೊಗ್ಗ ವೆಂಕಟೇಶ್ ಎಂಬಾತ 2009ರಲ್ಲಿ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದನು. ಆ ನಂತರ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ 4 ಪ್ರಕಾರಣಗಳನ್ನು ನ್ಯಾಯಾ ಲಯದಲ್ಲಿ ಎಲ್‌ಪಿಸಿ ಪ್ರಕರಣವಾಗಿ ವಾರೆಂಟ್ ಜಾರಿಯಲ್ಲಿತ್ತು.

ಈ ಮಧ್ಯೆ ಪೊಲೀಸರು 2017ರಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾ ಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಮತ್ತೆ ಜಾಮೀನು ಪಡೆದುಕೊಂಡು ಬಿಡುಗಡೆಯಾದ ವೆಂಕಟೇಶ್ ನ್ಯಾಯಾಲಯಕ್ಕೆ ಸುಮಾರು 9 ವರ್ಷಗಳಿಂದ ಹಾಜರಾಗದೆ ತಲೆಮರೆಸಿ ಕೊಂಡಿದ್ದನು.

ಅ.3ರಂದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು, ಅ.4ರಂದು ಕಾರ್ಕಳ ನ್ಯಾಯಾಲಯ ಹಾಜರು ಪಡಿಸಿದರು. ನ್ಯಾಯಾಲಯವು ಆರೋಪಿಗೆ ಅ.17ರವರೆಗೆ ನ್ಯಾಯಾಂಗ ಬಂಧನ ಒಪ್ಪಿಸಿ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor