ಮೂಡುಬೆಳ್ಳೆ: ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ತಡೆ ವಿರೋಧಿಸಿ ಪ್ರತಿಭಟನೆ
ಶಿರ್ವ, ಅ.5: ಕಟ್ಟಿಂಗೇರಿ ಗ್ರಾಮದ ಕೇನೆಕುಂಜದ ಸರಕಾರಿ ಜಮೀನಿನಲ್ಲಿ ವಾರಾಹಿಯಿಂದ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಶನ್ ಯೋಜನೆಯ ಭಾಗವಾದ ಓವರ್‌ಹೆಡ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವುದನ್ನು ವಿರೋದಿಸಿ ಮೂಡುಬೆಳ್ಳೆ ನಾಗರಿಕ ಸಮಿತಿಯ ವತಿಯಿಂದ ಬೆಳ್ಳೆ ಗ್ರಾಮ ಪಂಚಾಯತ್ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಾಗರಿಕ ಸಮಿತಿ ಅಧ್ಯಕ್ಷ ಸುಧಾಕರ ಪೂಜಾರಿ ಮಾತನಾಡಿ, ಟ್ಯಾಂಕ್ ನಿರ್ಮಾಣ ಸ್ಥಳವು ಸರಕಾರಿ ಜಮೀನು ಆಗಿದ್ದು ಈ ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು, ತಾಲ್ಲೂಕು ಭೂ ಮಾಪಕರು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದ ಜಂಟಿ ಅಳತೆ ಮಾಡಿದ ಸಂದರ್ಭದಲ್ಲಿ ಈ ಜಮೀನು ಡೀಮ್ಡ್ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟವಾ ಗಿತ್ತು. ಆದರೆ ಅರಣ್ಯಾಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿಯನ್ನು ಬದಿಗೊತ್ತಿ ಇಕ್ಕೆಲಗಳಲ್ಲಿ ರಸ್ತೆ ಇರುವ ಸರಕಾರಿ ಖಾಲಿ ಜಮೀನಿನಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲು ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಪು ತಹಶೀಲ್ದಾರ್ ಅನಂತ ಶಂಕರ, ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ, ಕಂದಾಯ ಪರೀಕ್ಷಕ ಇಜ್ಜಾರ್ ಶಬ್ಬೀರ್, ಪ್ರದೀಪ್ ಕುಮಾರ್, ಪಿ.ಡಿ.ಒ. ಆಶಾಲತಾ, ಗ್ರಾಮ ಸಹಾಯಕ ಸ್ಟ್ಯಾನಿ ಡಿಸೋಜ, ಜಿ.ಪಂ. ಇಂಜಿನಿಯರ್ ಉದಯಕುಮಾರ್ ಶೆಟ್ಟಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು.
ಸ್ಥಳ ಪರಿಶೀಲನೆ ನಡೆಸಿದ ಕಾಪು ತಹಶೀಲ್ದಾರ್ ಅನಂತ ಶಂಕರ್, ಸರಕಾರಿ ಜಮೀನಿನಲ್ಲಿ ಯಾವುದೇ ಮರಗಳಿರುವುದಿಲ್ಲ. ಕೇವಲ 3 ಸೆಂಟ್ಸು ಜಮೀನಿನಲ್ಲಿ ಟ್ಯಾಂಕ್ ನಿರ್ಮಾಣ ಸಾಧ್ಯ ಇದೆ ಎಂಬ ಬಗ್ಗೆ ಸ್ಥಳ ಪರಿಶೀಲನಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಕಟ್ಟಿಂಗೇರಿ ಶ್ರೀಬ್ರಹ್ಮಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ದೇವದಾಸ್ ಹೆಬ್ಬಾರ್, ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಮಾಜಿ ಉಪಾಧ್ಯಕ್ಷ ಹರೀಶ್ ಶೆಟ್ಟಿ ಕಕ್ರಮನೆ, ಗ್ರಾಪಂ ಮಾಜಿ ಸದಸ್ಯ ರಾದ ಎ.ಜಿ.ಡಿಸೋಜ, ಗುರುರಾಜ ಭಟ್, ಅಶೋಕ್, ಐವನ್ ದಲ್ಮೇದಾ, ಪಾಣಾರ ಸಂಘದ ಗೌರವಾಧ್ಯಕ್ಷ ಸುಧಾಕರ ಪಾಣಾರ, ಅಧ್ಯಕ್ಷ ರಾಜು ಪಾಣಾರ, ಸ್ಥಳೀಯ ಮುಖಂಡರಾದ ಫ್ರಾನ್ಸಿಸ್ ಕಸ್ತಲೀನೋ, ರಾಮ ಕೇನೆಕುಂಜ, ಶಾಂತಾರಾಮ, ಸಂದೇಶ್, ಜಯ್, ದಯಾನಂದ ಭಂಡಾರಿ, ಅನಿಲ್ ಆಳ್ವಾ, ಸೂರಜ್ ಪೂಜಾರಿ, ಗಣೇಶ ಕುಲಾಲ್, ರಮೇಶ್ ಅಬ್ಬು ಪಡುಬೆಳ್ಳೆ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಅಶ್ವಿನಿ ಲಾರೆನ್ಸ್ ಮೂಡುಬೆಳ್ಳೆ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.