×
Ad

ಚಿರತೆ ದಾಳಿಗೆ ಸಾಕು ನಾಯಿ ಬಲಿ

Update: 2023-11-20 20:05 IST

ಶಿರ್ವ, ನ.20: ಇಲ್ಲಿನ ಪದವು ಕಲ್ಲೋಟ್ಟು ಎಂಬಲ್ಲಿ ಇಂದು ಬೆಳಗಿನ ಜಾವ ಚಿರತೆಯೊಂದು ಸಾಕು ನಾಯಿಯನ್ನು ಬಲಿ ತೆಗೆದುಕೊಂಡಿದ್ದು, ಇದರಿಂದ ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಸ್ಥಳೀಯ ನಿವಾಸಿ ದೇವಣ್ಣ ನಾಯಕ್ ಎಂಬವರ ಮನೆಯ ಬಳಿ ಆಹಾರ ಅರಸಿ ಬಂದ ಚಿರತೆಯು ಅವರ ಸಾಕು ನಾಯಿ ಯನ್ನು ಬೇಟೆಯಾಡಿದೆ. ನಾಯಿಯ ಮುಕ್ಕಾಲು ಭಾಗ ತಿಂದು, ಉಳಿದ ಭಾಗ ಅಲ್ಲಿಯೇ ಬಿಟ್ಟು ಹೋಗಿದೆ.

ಈ ಪರಿಸದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿ ಕಂಡುಬಂದಿದ್ದು ಸಂಬಂಧಪಟ್ಟ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News