×
Ad

ಮುಂಬೈ-ಮಂಗಳೂರು ಜಂಕ್ಷನ್ ರೈಲಿಗೆ ಹೆಚ್ಚುವರಿ ಕೋಚ್ ಸೇರ್ಪಡೆ

Update: 2023-09-21 19:30 IST

ಸಾಂದರ್ಭಿಕ ಚಿತ್ರ

ಉಡುಪಿ, ಸೆ.21: ಗಣೇಶ ಹಬ್ಬದ ಪ್ರಯುಕ್ತ ಪ್ರಯಾಣಿಕರ ಬೇಡಿಕೆಯಂತೆ ಮುಂಬೈ ಲೋಕಮಾನ್ಯ ತಿಲಕ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ವಿಶೇಷ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಜನರಲ್ ಕೋಚ್‌ನ್ನು ಅಳವಡಿಸಲಾಗುವುದು ಎಂದು ಕೊಂಕಣ ರೈಲ್ವೆ ಪ್ರಕಟಣೆ.

ರೈಲು ನಂ.01165 ಲೋಕಮಾನ್ಯ ತಿಲಕ್-ಮಂಗಳೂರು ರೈಲು ಸೆ.22, 23, 29 ಹಾಗೂ 30ರಂದು ಹಾಗೂ ರೈಲು ನಂ.01166 ಮಂಗಳೂರು ಜಂಕ್ಷನ್- ಲೋಕಮಾನ್ಯ ತಿಲಕ್ ನಡುವೆ ಸೆ.23, 24, 30 ಹಾಗೂ ಅ.1ರಂದು ಸಂಚರಿಸುವ ವಿಶೇಷ ರೈಲು ಒಂದು ಹೆಚ್ಚುವರಿ ಸ್ಲೀಪರ್ ಕೋಚ್‌ನೊಂದಿಗೆ (ಒಟ್ಟು 24) ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News