ಬೈಂದೂರು: ಮಸೀದಿ ಕೆರೆಯಲ್ಲಿ ಮುಳುಗಿ ಬಾಲಕ ಮೃತ್ಯು
Update: 2025-07-14 12:30 IST
ಸಾಂದರ್ಭಿಕ ಚಿತ್ರ
ಬೈಂದೂರು, ಜು.14: ಮಸೀದಿಯ ಕೆರೆಯಲ್ಲಿ ಕಾಲು ತೊಳೆಯಲು ಹೋದ ಬಾಲಕ ಅಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಜು.13ರಂದು ಸಂಜೆ 6.45ರ ಸುಮಾರಿಗೆ ಬೈಂದೂರಿನಲ್ಲಿ ನಡೆದಿದೆ.
ಮೃತರನ್ನು ಬೈಂದೂರಿನ ಅಬ್ದುಲ್ ರಹೀಮ್ ಎಂಬವರ ಮಗ ಅಯಾನ್ ರಝಾ(12) ಎಂದು ಗುರುತಿಸಲಾಗಿದೆ. ಇವರು ಯಡ್ತರೆ ಗ್ರಾಮದ ಬೈಂದೂರು ಜಾಮಿಯಾ ಮಸೀದಿಯ ಕೆರೆಯಲ್ಲಿ ಕಾಲು ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದರೆನ್ನಲಾಗಿದೆ. ಇದರಿಂದ ರಝಾ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.