×
Ad

ಸೌಂದರ್ಯ ತಜ್ಞೆಯರಿಂದ ರಕ್ತದಾನ ಶಿಬಿರ

Update: 2023-09-01 17:55 IST

ಕುಂದಾಪುರ, ಸೆ.1: ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘ ಉಡುಪಿ ಕುಂದಾಪುರ ವಲಯ ಹಾಗೂ ಇಂಡಿಯನ್ ರೆಡಕ್ರಾಸ್ ಸೊಸೈಟಿ ಕುಂದಾಪುರ ಇವುಗಳ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಬುಧವಾರ ಕುಂದಾಪುರ ಹೋಟೆಲ್ ಶರೋನ್‌ನಲ್ಲಿ ಏರ್ಪಡಿಸಲಾಗಿತ್ತು.

ಶಿಬಿರವನ್ನು ಕಿಶ್ವರ್ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ವೇದಾ ಸುವರ್ಣ, ಎಡ್ನ ಜತ್ತನ್ನ ಹಾಗೂ ವೀರೇಂದ್ರ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸುವಿತಾ ಗಣೇಶ್ ವಹಿಸಿದ್ದರು.

ಕುಂದಾಪುರ ವಲಯ, ಬ್ರಹ್ಮಾವರ ವಲಯ, ಬೈಂದೂರು ವಲಯ, ಉಡುಪಿ ವಲಯದಿಂದ ಸೌಂದರ್ಯ ತಜ್ಞೆಯರು ಆಗಮಿಸಿದ್ದರು. ಕವನಾ ಕಾರ್ಯಕ್ರಮ ನಿರೂಪಿಸಿದರು. ಶೋಭಾ ವಂದಿಸಿದರು. ಶಿಬಿರದಲ್ಲಿ 37ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News