×
Ad

ಬ್ರಹ್ಮಾವರ: ಆದಿದ್ರಾವಿಡ ಸಹಕಾರ ಸಂಘದ ಮಹಾಸಭೆ

Update: 2023-09-30 15:41 IST

ಬ್ರಹ್ಮಾವರ, ಸೆ.30: ಆದಿದ್ರಾವಿಡ ಸಹಕಾರ ಸಂಘ ನಿಯಮಿತ ತೆಂಕುಬಿರ್ತಿ ಬ್ರಹ್ಮಾವರ ಇದರ ಏಳನೇ ಮಹಾಸಭೆಯು ಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯನ್ನು ವಾರಂಬಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ನಾರಾಯಣ ಬಿರ್ತಿ ಉಧ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಆದಿದ್ರಾವಿಡ ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಮಾಸ್ತರ್ ಗುಜ್ಜರ್‌ಬೆಟ್ಟು ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದರು. ಸಹಕಾರ ಸಂಘದ ಆಯವ್ಯಯವನ್ನು ಬಿರ್ತಿ ಸುರೇಶ ಮಂಡಿಸಿದರು.

ಸಿಂಡಿಕೇಟ್ ಬ್ಯಾಂಕ್ ನಿವ್ರೃತ್ತ ಮುಖ್ಯ ಪ್ರಭಂಧಕ ವಿಠಲ ಬಿರ್ತಿ, ಬ್ಯಾಂಕ್ ಆಫ್ ಬರೋಡ ಕೊಳಲಗಿರಿಯ ಪ್ರಭಂಧಕ ಸುಭ್ರಮಣ್ಯ ಪ್ರಸಾದ್, ಕರ್ನಾಟಕ ಬ್ಯಾಂಕಿನ ಬಿರ್ತಿ ಸುರೇಶ, ನ್ಯಾಶನಲ್ ಇನ್ಸೂರೆನ್ಸ್ ಬೋಜರಾಜ್ ತಲ್ಲೂರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶ್ಯಾಮರಾಜ್ ಬಿರ್ತಿ, ಕೆನರಾ ಬ್ಯಾಂಕ್‌ನ ಶಿವಾನಂದ ಬಿರ್ತಿ, ಹರೀಶ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.

ಸಹಕಾರ ಸಂಘದ ನಿರ್ದೇಶಕರಾದ ಜಗನ್ನಾಥ, ಸಂತೋಷ ಬಿರ್ತಿ, ಅರುಣ ಕುಮಾರ್, ಶಂಕರ, ಚೈತನ್ಯ, ಸಂದೇಶ, ಪ್ರಶಾಂತ್ ಬಿರ್ತಿ, ಅನಿಲ ಬಿರ್ತಿ, ಗಂಗೆ, ಸುಮನ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಬಿರ್ತಿ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News