×
Ad

ಬ್ರಹ್ಮಾವರ: ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ಕೊನೆಯುಸಿರೆಳೆದ ವೃದ್ಧೆ

Update: 2024-04-17 12:08 IST

ಉಡುಪಿ, ಎ.17: ಮನೆಯಲ್ಲಿ ಮತದಾನ ಮಾಡಿದ ಕೇಲವೇ ಕ್ಷಣದಲ್ಲಿ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರ ಎಂಬಲ್ಲಿ ಎ.16ರಂದು ನಡೆದಿದೆ.

ಚಡಗರ ಅಗ್ರಹಾರ ನಿವಾಸಿ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿ ಪಿ.ಯಶೋಧಾ(83) ಮೃತ ಮಹಿಳೆ. ಚುನಾವಣಾ ಆಯೋಗ ವಿಶೇಷ ಚೇತನರು, ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು, ಅದರಂತೆ ಪಿ.ಯಶೋಧಾ ಮನೆಯಲ್ಲೆ ಮತದಾನ ಮಾಡಿದ್ದರು.

ಮತದಾನದ ದಿನ ಪಿ.ಯಶೋಧಾ ಅವರಿಗೆ ಎದೆ ನೋವು ಕಾಣಿಸಿ ಕೊಂಡಿದ್ದರೂ ಮತದಾನ ಮಾಡಿದ ಬಳಿಕವೇ ಆಸ್ಪತ್ರೆಗೆ ತೆರಳಲು ನಿರ್ಧರಿಸಿ ದ್ದರು. ಹಾಗೆ ಮನೆಯಲ್ಲಿ ಮತದಾನ ಮಾಡಿದ ಅವರನ್ನು ಬಳಿಕ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರವಾಗಿ ಅಸ್ವಸ್ಥಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News