×
Ad

ಬ್ರಹ್ಮಾವರ ಲಿಟ್ಲ್‌ರಾಕ್ ವರ್ಬ್ಯಾಟಲ್ ಚಾಂಪಿಯನ್

Update: 2023-08-21 19:34 IST

ಬ್ರಹ್ಮಾವರ, ಆ.21: ಬೆಂಗಳೂರಿನಲ್ಲಿ ನಡೆದ ಜೂನಿಯರ್ ಪ್ಲಸ್ ವಿಭಾಗದ ವರ್ಬ್ಯಾಟಲ್ ಚಾಂಪಿಯನ್‌ಷಿಪ್‌ನಲ್ಲಿ ಬ್ರಹ್ಮಾವರ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನ 12ನೇ ತರಗತಿ ವಿದ್ಯಾರ್ಥಿಗಳಾದ ಕ್ರಿಸ್ಟನ್ ವಿಲ್‌ಫ್ರೆಡ್ ಕೊಯೆಲೋ ಹಾಗೂ ಪರ್ಲ್ ಆಂಡ್ರಿಯಾ ಡಿಸೋಜ ಅಗ್ರಪ್ರಶಸ್ತಿ ಗಳನ್ನು ಗೆದ್ದುಕೊಂಡಿದ್ದಾರೆ.

ಕ್ರಿಸ್ಟನ್ ಮತ್ತು ಪರ್ಲ್ ಅವರು ಚಾಂಪಿಯನ್‌ಷಿಪ್ ಪ್ರಶಸ್ತಿಯೊಂದಿಗೆ ತಲಾ 20 ಸಾವಿರ ರೂ.ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ಕರ್ನಾಟಕದ 50 ತಂಡಗಳು ಭಾಗವಹಿಸಿದ್ದವು. ಅರ್ಹತಾ ಸುತ್ತಿನ ಮೂಲಕ ಗೆದ್ದುಬಂದ ಲಿಟ್ಲ್‌ರಾಕ್ ತಂಡ, ಅಂತಿಮ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಅಗ್ರಸ್ಥಾನಿಯಾಯಿತು.

ತಮ್ಮ ಶಾಲೆಯ ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಗಾಗಿ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನ ನಿರ್ದೇಶಕ ಪ್ರೊ. ಮ್ಯಾಥ್ಯೂ ಸಿ. ನೈನಾನ್, ಪ್ರಾಂಶುಪಾಲರಾದ ಡಾ.ಜಾನ್ ಥಾಮಸ್ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಪ್ರಸಿದ್ಧ ಪತ್ರಕರ್ತ ಹಾಗೂ ಟಿವಿ ನಿರೂಪಕ ದೀಪಕ್ ತಿಮ್ಮಯ್ಯ ನೇತೃತ್ವದ ವರ್ಬ್ಯಾಟಲ್ ತಂಡದಿಂದ ಈ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News