ಬ್ರಹ್ಮಾವರ| ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಆನ್‌ಲೈನ್ ವಂಚನೆ: ಪ್ರಕರಣ ದಾಖಲು
Update: 2025-07-15 22:36 IST
ಬ್ರಹ್ಮಾವರ, ಜು.15: ಬ್ಯಾಂಕ್ ಅಧಿಕಾರಿಗಳೆಂದು ಕರೆ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ರೂ. ಹಣವನ್ನು ವರ್ಗಾಯಿಸಿ ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀಲಾವರ ಗ್ರಾಮದ ಶೈಲಜಾ(35) ಎಂಬವರಿಗೆ ಜು.11ರಂದು ಅಕ್ಸಿಸ್ ಬ್ಯಾಂಕಿನಿಂದ ಕರೆ ಮಾಡುವು ದಾಗಿ ಹೇಳಿ ಮಾತನಾಡಿದ ಅಪರಿಚಿತರು ತಮ್ಮ ಖಾತೆಯಲ್ಲಿ ಹಣ ಇಲ್ಲದೆ ಇರುವುದರಿಂದ ಕ್ಲೋಸ್ ಮಾಡಲಾಗುವುದು ಎಂದು ತಿಳಿಸಿದ್ದನು. ಅದಕ್ಕೆ ನಿಮ್ಮ ಬೇರೆ ಖಾತೆಯಲ್ಲಿರುವ ಹಣವನ್ನು ಈ ಖಾತೆಗೆ ಜಮೆ ಮಾಡುವಂತೆ ತಿಳಿಸಿದ್ದನು. ಅದನ್ನು ನಂಬಿದ ಶೈಲಜಾ, ಹಣ ವನ್ನು ಖಾತೆಗೆ ವರ್ಗಾವಣೆ ಮಾಡುವಾಗ ಅವರ ಎರಡೂ ಖಾತೆಗಳಿಂದ ಒಟ್ಟು 1,22,392ರೂ. ಹಣವನ್ನು ಆರೋಪಿಗಳು ಪಡೆದು ವಂಚಿಸಿರುವುದಾಗಿ ದೂರಲಾಗಿದೆ.