×
Ad

ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಮುಷ್ಕರ: ಉಡುಪಿ ಜಿಲ್ಲೆಯಾದ್ಯಂತ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ತೆರವು

Update: 2023-10-02 21:02 IST

ಉಡುಪಿ: ಉಡುಪಿ ಜಿಲ್ಲಾ ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಮತ್ತು ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರ ಸೋಮವಾರವೂ ಮುಂದುವರೆದಿದ್ದು, ಅ.3ರಂದು ರಾಜ್ಯಪಾಲರು ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮನವಿ ಮೇರೆಗೆ ರಸ್ತೆ ಬದಿ ಗಳಲ್ಲಿ ನಿಲ್ಲಿಸಲಾದ ಟೆಂಪೋ ಹಾಗೂ ಲಾರಿಗಳನ್ನು ಇಂದು ತೆರವುಗೊಳಿಸ ಲಾಯಿತು.

ಉದ್ಯಾವರ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ ೬೬ರ ಬದಿಯಲ್ಲಿ ನಿಲ್ಲಿಸ ಲಾಗಿದ್ದ ನೂರಾರು ಲಾರಿ ಹಾಗೂ ಟೆಂಪೋ ಗಳನ್ನು ತೆರವುಗೊಳಿಸಿ, ಕಟಪಾಡಿ ಸಮೀಪದ ಮೈದಾನದಲ್ಲಿ ನಿಲ್ಲಿಸಲಾಗಿದೆ. ಅದೇ ರೀತಿ ಜಿಲ್ಲೆಯಾದ್ಯಂತ ರಸ್ತೆ ಬದಿ ನಿಲ್ಲಿಸಲಾಗಿದ್ದ ವಾಹನಗಳನ್ನು ತೆರವುಗೊಳಿಸಿ ಅಲ್ಲೇ ಸಮೀಪದ ಮೈದಾನ ದಲ್ಲಿ ನಿಲ್ಲಿಸಲಾಗಿದೆ. ಸಮಸ್ಯೆ ಬಗೆಹರಿಯು ವವರೆಗೆ ನಮ್ಮ ಮುಷ್ಕರ ಮುಂದು ವರೆಯಲಿದೆ ಎಂದು ಒಕ್ಕೂಟದ ಪ್ರಮುಖ ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News