×
Ad

ಬೈಂದೂರು | ಎಲ್ಲೂರು ಕಂಬಳ : ವಿಜೇತ ತಂಡಗಳಿಗೆ ಬಹುಮಾನ ವಿತರಣೆ

Update: 2025-11-28 20:05 IST

ಬೈಂದೂರು, ನ.28: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕುಡೂರು ಮನೆಯವರ ಯಜಮಾನಿಕೆಯ ಎಲ್ಲೂರು ಕಂಬಳ ಗುರುವಾರ ಸಂಜೆ ವೈಭವದಿಂದ ನಡೆಯಿತು.

ಜಿಲ್ಲೆಯ ಹಿರಿಯ ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಮಾರ್ಗದರ್ಶನದಲ್ಲಿ ನಡೆದ ಕಂಬಳ ಮಹೋತ್ಸವಕ್ಕೆ ಕುಡೂರು ಮನೆಯ ಯಜಮಾನ ರಾಮ ಕಿಶನ್ ಹೆಗ್ಡೆ ಕೋಣದ ಮಾಲಕರಿಗೆ ತಾಂಬೂಲ ಗೌರವ ನೀಡುವ ಮೂಲಕ ಚಾಲನೆ ನೀಡಿದರು.

ಶಾಸಕ ಗುರುರಾಜ್ ಗಂಟಿಹೊಳೆ, ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ರಾಮ್ರತನ್ ಹೆಗ್ಡೆ, ಅನುಪಮಾ ಎಸ್.ಶೆಟ್ಟಿ, ಪ್ರೀತಮ್ ಎಸ್.ರೈ, ಶ್ರೀಶಾ ರೈ, ವೈಷ್ಣಮಿ ಆರ್.ಹೆಗ್ಡೆ, ಸರ್ಜಿತ್ ಶೆಟ್ಟಿ ಕುಡೂರು, ಮೋಹನ್ದಾಸ್ ಶೆಟ್ಟಿ ಕುಡೂರು, ಎಂ.ಆರ್.ಶೆಟ್ಟಿ, ಎಂ.ರಘುರಾಮ್ ಶೆಟ್ಟಿ ಉಪಸ್ಥಿತರಿದ್ದರು.

ಉಡುಪಿ ಹಾಗೂ ಕಾರವಾರ ಜಿಲ್ಲೆಯ 48 ಜೊತೆ ಕೋಣಗಳು, ಕಂಬಳ ಗದ್ದೆಯಲ್ಲಿ ಓಟ ನಡೆಸಿದ್ದವು. ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಮಂಗಳೂರು ವಿವಿ ಕುಂದಾಪುರ ಕನ್ನಡ ಅಧ್ಯಯನ ಪೀಠದ ಸದಸ್ಯ ರಾಜೇಶ್ ಕೆ.ಸಿ., ಬೈಂದೂರು ರೈತ ಸಂಘದ ಅಧ್ಯಕ್ಷ ಎನ್.ದೀಪಕುಮಾರ ಶೆಟ್ಟಿ, ರಾಜ್ಯ ಕಂಬಳ ಅಸೋಸಿಯೇಶನ್ ಸದಸ್ಯ ವಿಕ್ರಂ ವೆಂಕಟ ಪೂಜಾರಿ, ಬೈಂದೂರು ಕಂಬಳ ಸಮಿತಿ ಅಧ್ಯಕ್ಷ ಮಂಜುನಾಥ ಪೂಜಾರಿ ಸಸಿಹಿತ್ಲು, ಕಾರ್ಯದರ್ಶಿ ಸುರ್ಧೀ ದೇವಾಡಿಗ, ಕೋಶಾಧಿಕಾರಿ ಭರತ್ ಕೊಠಾರಿ, ಪರಮೇಶ್ವರ ಭಟ್ ಬೊಳಂಬಳ್ಳಿ, ನಿವೃತ್ತ ಮುಖ್ಯ ಶಿಕ್ಷಕ ರತ್ನಾಕರ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಚುಚ್ಚಿ ನಾರಾಯಣ ಶೆಟ್ಟಿ, ಉದ್ಯಮಿ ಸತೀಶ್ ಶೆಟ್ಟಿ ಅರೆ ಶಿರೂರು, ಗಣಪ ಗಂಗನಾಡು, ಶಿವರಾಂ ಶೆಟ್ಟಿ ಎಲ್ಲೂರು, ರವಿ ಹೋಬಳಿರ್ದಾ , ಆನಂದ್ ನಾಯ್ಕ್ ಸಣ್ಣಮನೆ, ಕುಮಾರ ನಾಯ್ಕ್, ಗೌಡ ಅಣ್ಣಪ್ಪ ಮರಾಠಿ ಎಲ್ಲೂರು ಉಪಸ್ಥಿತರಿದ್ದರು.

ಬಹುಮಾನ ವಿತರಣೆ :

ಕಂಬಳ ಉತ್ಸವದ ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಾಸಕ ಗುರುರಾಜ್ ಗಂಟಿಹೊಳೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿದರು.

ಹಲಗೆ :

ಪ್ರ- ಶ್ರೀಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ ಕೋಣಗಳು, ತೆಕ್ಕಟ್ಟೆ ಸುಧೀರ್ ದೇವಾಡಿಗ(ಸವಾರಿಗ), ದ್ವಿ- ದಿ.ಶುಕ್ರ ಪೂಜಾರಿ ಮೊಳೆಬೈಲ್ ಕೋಣಗಳು, ಭರತ್ ಶಿರೂರು ಮುದ್ದುಮನೆ(ಸವಾರಿಗ). ಹಗ್ಗ ಹಿರಿಯ: ಪ್ರ-ದಿ.ವೆಂಕಟ ಪೂಜಾರಿ ಸಸಿಹಿತ್ಲು ಎ ಕೋಣಗಳು, ಮಂಜುನಾಥ ಗೌಡ ಬೈಂದೂರು(ಸವಾರಿಗ). ದ್ವಿತೀಯ- ದಿ.ವೆಂಕಟ ಪೂಜಾರಿ ಸಸಿಹಿತ್ಲು ಬಿ ಕೋಣಗಳು, ಮಂಜುನಾಥ ಗೌಡ ಬೈಂದೂರು (ಸವಾರಿಗ).

ಹಗ್ಗ ಕಿರಿಯ :

ಪ್ರ- ದುರ್ಗಾ ಫ್ರೆಂಡ್ಸ್ ಕಂಚಿಕಾನ್ ಕೋಣಗಳು, ಮಂಜುನಾಥ್ ಗೌಡ ಬೈಂದೂರು(ಸವಾರಿಗ). ದ್ವಿ- ಗಿರಿಜಾ ರೋಡ್ಲೈನ್ಸ್ ಗಾಡಿ ಕೂಸ ಪೂಜಾರಿ ಕೋಟ ಕೋಣಗಳು, ಮಂಜುನಾಥ್ ಗೌಡ ಬೈಂದೂರು(ಸವಾರಿಗ). ಹಗ್ಗ ಅತಿ ಕಿರಿಯ: ಪ್ರ- ಶ್ರೀಸ್ಕಂದ ಆರ್ವಿಕ್ ಪ್ರದೀಪ್ ಉಳ್ಳೂರು ಕಂದಾವರ ಕೋಣಗಳು, ಹರೀಶ್ ಪೂಜಾರಿ ಬೈಂದೂರು(ಸವಾರಿಗ). ದ್ವಿ- ಶಂಕು ಮಹಾಸತಿ ಸಂಕಡಗುಂಡಿ ಶಿರೂರು ಕೋಣಗಳು, ಶಂಕರ್ ದೇವಾಡಿಗ ನಾಗೂರು(ಸವಾರಿಗ), ತೃ- ಸುಜಿತ್ ಸುಪ್ರೀತ್ ಗಣಪ ಗಂಗನಾಡು ಕೋಣಗಳು, ವಿಶ್ವನಾಥ್ ದೇವಾಡಿಗ ಬೈಂದೂರು(ಸವಾರಿಗ).

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News