ಬೈಂದೂರು| ದೇವಸ್ಥಾನದ ಅರ್ಚಕನಿಗೆ 6 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು
Update: 2025-09-07 22:04 IST
ಬೈಂದೂರು, ಸೆ.7: ದೇವಸ್ಥಾನದ ಅರ್ಚಕರೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಗುರುಮೂರ್ತಿ ಜಿ ಹೆಗಡೆ (31) ಎಂಬವರ ಮೊಬೈಲ್‌ಗೆ ಸೆ.6ರಂದು ಲಿಂಕ್ ಬಂದಿದ್ದು ಅದರಲ್ಲಿ ಟಾಸ್ಕ್ ನೀಡಿ ಹೆಚ್ಚಿನ ಹಣ ನೀಡುವುದಾಗಿ ತಿಳಿಸಲಾಗಿತ್ತು. ಅದರಂತೆ ಇವರು ವಿವಿಧ ಖಾತೆಗಳಿಗೆ ಬೇರೆ ಬೇರೆ ಹಂತಗಳಲ್ಲಿ ಒಟ್ಟು 6,16,700ರೂ. ಹಣ ಹಾಕಿದ್ದು, ಆದರೆ ಆರೋಪಿಗಳು ಹಣವನ್ನು ಹಿಂದಕ್ಕೆ ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.