×
Ad

ಬೈಂದೂರು: ಲಾರಿಗಳನ್ನು ಸಾಗಿಸುವ ರೋ ರೋ ರೈಲಿನಲ್ಲಿ ಅಕಸ್ಮಿಕ ಬೆಂಕಿ

Update: 2023-10-10 20:45 IST

ಬೈಂದೂರು: ಲಾರಿಗಳನ್ನು ಸಾಗಿಸುವ ರೋ ರೋ ರೈಲಿನಲ್ಲಿ ಅಕಸ್ಮಿಕ ವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಾರ ಸೊತ್ತುಗಳಿಗೆ ಹಾನಿಯಾಗಿ ರುವ ಘಟನೆ ಬಿಜೂರು ರೈಲ್ವೆ ನಿಲ್ದಾಣದಲ್ಲಿ ಅ.10ರಂದು ಮುಂಜಾನೆ ಸಂಭವಿಸಿದೆ.

ಅ.9ರಂದು ಮುಂಬೈ ಕೋಲಾಡ್‌ನಿಂದ ಮಂಗಳೂರು ಸುರತ್ಕಲ್‌ ಕಡೆಗೆ ಲಾರಿಗಳನ್ನು ಹೊತ್ತ ರೈಲು ಮಂಗಳವಾರ ಮುಂಜಾನೆ ಬಿಜೂರು ರೈಲ್ವೆ ನಿಲ್ದಾಣದ ಸಮೀಪ ತಲುಪಾಗ ಲಾರಿಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿ ಕೊಂಡಿತ್ತೆನ್ನಲಾಗಿದೆ.

ಮಾಹಿತಿ ತಿಳಿದ ತಕ್ಷಣವೇ ಸಿಬಂದಿ ರೈಲು ನಿಲ್ಲಿಸಿ, ಬೆಂಕಿ ಆರಿಸಲು ಪ್ರಯತ್ನಿಸಿದರು. ಲಾರಿ ಒಳಗಿದ್ದ ತಿಂಡಿ ತಿನಿಸುಗಳು ಭಾಗಶಃ ಸುಟ್ಟು ಹೋಗಿದೆ. ಬೈಂದೂರು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News