ಪಡುಬಿದ್ರಿ: ಅಪರಿಚಿತರಿಬ್ಬರಿಂದ ಮಹಿಳೆಯ ಸರ ಸುಲಿಗೆ
Update: 2025-05-23 23:55 IST
ಸಾಂದರ್ಭಿಕ ಚಿತ್ರ
ಪಡುಬಿದ್ರಿ: ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ಮಹಿಳೆಯ ಸರ ಸುಲಿಗೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಹೆಜಮಾಡಿ ಮಾರುತಿ ರೋಡ್ ಬಳಿ ಮೇ 22ರಂದು ಬೆಳಗ್ಗೆ ನಡೆದಿದೆ.
ಸುಲೋಚನ(50) ಎಂಬವರು ಮನೆ ಕೆಲಸ ಮಾಡಿಕೊಂಡು ತ್ಯಾಜ್ಯವನ್ನು ಎಸೆಯಲು ಮನೆಯ ಹೊರಗಡೆ ರಸ್ತೆಗೆ ಬಂದು ನಿಂತಿದ್ದು, ಈ ವೇಳೆ ಅಪರಿಚಿತರಿಬ್ಬರು ಬೈಕಿನಲ್ಲಿ ಹೆಜಮಾಡಿ ಯಾರ್ಡ್ ಕಡೆಯಿಂದ ಸುಲೋಚನಾ ಹತ್ತಿರ ಬಂದರು. ಈ ವೇಳೆ ಬೈಕಿನ ಹಿಂದೆ ಕುಳಿತಿದ್ದ ವ್ಯಕ್ತಿ ಒಮ್ಮೆಲೆ ಸುಲೋಚನಾ ಅವರ ಕುತ್ತಿಗೆಗೆ ಕೈಹಾಕಿ ಕುತ್ತಿಗೆಗೆ ಹಾಕಿ 6 ಗ್ರಾಂ ಬಂಗಾರದ ಕರಿಮಣಿ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾದರು. ಇದರ ಪರಿಣಾಮ ಸುಲೋಚನಾ ಅವರ ಕುತ್ತಿಗೆಯ ಬಳಿ ನೋವುಂಟಾಗಿದೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.