×
Ad

ಅಪಾಯದಂಚಿನಲ್ಲಿ ಕೋಡಿ ಸೀವಾಕ್: ಶಾಸಕರ ಭೇಟಿ

Update: 2023-07-26 19:21 IST

ಕುಂದಾಪುರ, ಜು.26: ಸಮುದ್ರ ಅಲೆಗಳ ಅಬ್ಬರದಿಂದ ಪ್ರಸಿದ್ಧ ಪ್ರವಾಸಿ ತಾಣವಾದ ಕೋಡಿ ಸೀವಾಕ್ ಅಪಾಯದ ಅಂಚಿನಲ್ಲಿದ್ದು, ಈ ಸಂಬಂಧ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿರಂತರ ಮಳೆಯಿಂದಾಗಿ ಭಾರೀ ಗಾತ್ರದ ಅಲೆಗಳು ಸೀವಾಕ್‌ಗೆ ಅಪ್ಪಳಿಸುತ್ತಿದ್ದು, ಅಲೆಗಳು ತಡೆಗೋಡೆಗೆ ಅಪ್ಪಳಿಸಿ ಸೀ ವಾಕ್ ಒಳ ಆವರಣ ಪ್ರವೇಶಿಸುತ್ತಿದೆ. ಈ ಮೂಲಕ ಸೀ ವಾಕ್ ಭದ್ರತೆಗೆ ಅಪಾಯ ತಂದೊಡ್ಡಿದೆ. ಅಲೆಯ ಅರಿವಿಲ್ಲದೆ ಸೀವಾಕ್ ತುದಿಗೆ ಸಾಗುವ ಜನರು ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇದ್ದು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ, ತುರ್ತು ವ್ಯವಸ್ಥೆ ಕಲ್ಪಿಸಲು ಶಾಸಕರು ಸೂಚಿಸಿದರು.

ಈ ಸಂದರ್ಭದಲ್ಲಿ ಕುಂದಾಪುರ ಮಂಡಲ ಬಿಜೆಪಿಯ ಕ್ಷೇತ್ರದ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಗೋಪಾಡಿ, ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಮಹೇಶ್ ಪೂಜಾರಿ ಕೋಡಿ, ಸಾಮಾಜಿಕ ಹೋರಾಟಗಾರ ಅಶೋಕ ಪೂಜಾರಿ ಕೋಡಿ, ಪುರಸಭೆಯ ಮಾಜಿ ಉಪಾಧ್ಯಕ್ಷ ನಾಗರಾಜ್ ಕಾಂಚನ ಕೋಡಿಯ ಭಾಗದ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News