×
Ad

ಕೋಟ: ಸಾವಿನಲ್ಲೂ ಒಂದಾದ ಹಿರಿಯ ದಂಪತಿ

Update: 2024-08-02 14:27 IST

ಕೋಟ: ಹಿರಿಯ ದಂಪತಿಗಳು ಸಾವಿನಲ್ಲೂ ಒಂದಾದ ಘಟನೆ ಕೋಟ ಸಮೀಪದ ಬನ್ನಾಡಿ ಕಂಬಳಕಟ್ಟು ಎಂಬಲ್ಲಿ ನಡೆದಿದೆ. ಇಲ್ಲಿನ ಕಂಬಳಕಟ್ಟು ಗುರಿಕಾರ ಮನೆ ಕೃಷ್ಣ ಪೂಜಾರಿ (58) ಮತ್ತು ಅವರ ಧರ್ಮಪತ್ನಿ ಮುತ್ತು ಪೂಜಾರ್ತಿ(53) ಸಾವಿನಲ್ಲಿ ಒಂದಾದವರು.

ಕಂಬಳಕಟ್ಟು ಗುರಿಕಾರ ಮನೆ ಕೃಷ್ಣ ಪೂಜಾರಿ ಬ್ರಹ್ಮಬೈದರ್ಕಳ ಕಂಬಳಾಭಿಮಾನಿಯಾಗಿ, ಕಂಬಳದ ಸ್ವಯಂಸೇವಕರಾಗಿ ನಿರಂತರ ಸೇವೆ, ಕೃಷಿರಾಗಿ ಗುರುತಿಸಿಕೊಂಡಿದ್ದರು. ಅವರ ಪತ್ನಿ ಮುತ್ತು ಪೂಜಾರ್ತಿ ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕಿಯಾಗಿದ್ದವರು. ಕೃಷ್ಣ ಪೂಜಾರಿ ಅವರ ಪತ್ನಿ ಮುತ್ತು ಪೂಜಾರ್ತಿ ಬುಧವಾರ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮುತ್ತು ಪೂಜಾರ್ತಿಯವರ ಅಂತ್ಯಕ್ರಿಯೆ ಮುಗಿಸಿ ವಾಪಾಸ್ಸು ಬರುತ್ತಿದ್ದ ವೇಳೆ ಪತ್ನಿ ಕಳೆದುಕೊಂಡಿದ್ದ ಶಾಕ್ ನಲ್ಲಿದ್ದ ಅವರ ಪತಿ ಕೃಷ್ಣ ಪೂಜಾರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತ ದಂಪತಿಗಳು ಮೂವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News