ಬೈಂದೂರು | ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಗೆ ದಾಳಿ: ಸೊತ್ತು ವಶ
Update: 2025-10-12 21:04 IST
ಸಾಂದರ್ಭಿಕ ಚಿತ್ರ
ಬೈಂದೂರು: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಕಡೆಗಳಲ್ಲಿ ನಡೆಯುತ್ತಿದ್ದ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಗೆ ಅ.11ರಂದು ದಾಳಿ ನಡೆಸಿದ ಪೊಲೀಸರು ಸೊತ್ತುಗಳನ್ನು ವಶಪಡಿಸಿ ಕೊಂಡಿದ್ದಾರೆ.
ಕಾಲ್ತೋಡು ಗ್ರಾಮದ ಕಪ್ಪಡಿ ಎಂಬಲ್ಲಿರುವ ಸರಕಾರಿ ಜಾಗದಲ್ಲಿ ವಿಜಯ ಶೆಟ್ಟಿ ಎಂಬಾತ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, 90,000ರೂ. ಮೌಲ್ಯದ ಯಂತ್ರ, ಟಿಲ್ಲರ್, ಕೆಂಪು ಕಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಅದೇ ರೀತಿ ಗೊಳಿಹೋಳೆ ಗ್ರಾಮದ ಬಡ್ಕಿ ಎಂಬಲ್ಲಿನ ಸರಕಾರಿ ಜಾಗದಲ್ಲಿ ಮನೋಜ ಮೊಗವೀರ ಎಂಬಾತ ಅಕ್ರಮ ಕೆಂಪುಕಲ್ಲು ಗಣಿಕಾರಿಕೆ ನಡೆಸುತ್ತಿರುವ ಮಾಹಿತಿಯಂತೆ ದಾಳಿ ನಡೆಸಿ, 35,000ರೂ. ಮೌಲ್ಯದ ಕಲ್ಲು ಕಟ್ಟಿಂಗ್ ಮಾಡುವ ಟಿಲ್ಲರ್ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.