×
Ad

ಡಿ.26-28: ಕೋಡಿ ಬ್ಯಾರೀಸ್ ಶೈಕ್ಷಣಿಕ ಸಂಸ್ಥೆಯಲ್ಲಿ ಪದವಿ ಪ್ರದಾನ

ಸಂಸ್ಥಾಪಕರ ದಿನಾಚರಣೆ, ‘ಬ್ಯಾರೀಸ್ ಉತ್ಸವ-2025’

Update: 2025-12-24 20:10 IST

ಕುಂದಾಪುರ, ಡಿ.24: 1906ರಲ್ಲಿ ಸೂಫಿ ಸಾಹೇಬ್ ಕೋಡಿ ಇವರ ಮೂಲಕ ಹುಲ್ಲಿನ ಗುಡಿಸಿಲಿನಲ್ಲಿ ಅರಳಿದ ಕೋಡಿ ಬ್ಯಾರಿಸ್ ಶಿಕ್ಷಣ ಸಂಸ್ಥೆಗಳಿಂದು 120ರ ಸಂಭ್ರಮದಲ್ಲಿವೆ. ಈ ಸಂಸ್ಥೆಗಳ ಪದವಿ ಪ್ರದಾನ, ಸಂಸ್ಥಾಪಕರ ದಿನಾಚರಣೆ ಹಾಗೂ ಬ್ಯಾರೀಸ್ ಉತ್ಸವ-2025 ಕಾರ್ಯಕ್ರಮಗಳು ಡಿ.26ರಿಂದ 28ರವರೆಗೆ ನಡೆಯಲಿವೆ ಎಂದು ಬ್ಯಾರೀಸ್ ಗ್ರೂಫ್ ಆಫ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಅಶ್ವಿನಿ ಶೆಟ್ಟಿ ಹೇಳಿದ್ದಾರೆ.

ಬುಧವಾರ ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತ್ಯುತ್ತಮ ಶೈಕ್ಷಣಿಕ ಸಾಧನೆಯೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ’ ಹಮ್ಮಿಕೊಳ್ಳ ಲಾಗಿದೆ. ಡಿ.26ರ ಅಪರಾಹ್ನ 2:30ಕ್ಕೆ ಬ್ಯಾರಿಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಗಳಾಗಿ ಮಣಿಪಾಲ ಎಂಐಟಿ ಜಂಟಿ ನಿರ್ದೇಶಕರಾದ ಡಾ.ಚಂದ್ರಕಲಾ ಸಿ.ಎ, ಮಂಗಳೂರು ವಿವಿಯ ಕುಲಸಚಿವ (ಮೌಲ್ಯಮಾಪನ) ಡಾ.ಎಚ್. ದೇವೇಂದ್ರಪ್ಪ, ಗೌರವ ಅತಿಥಿ ಗಳಾಗಿ ಉಡುಪಿ ಡಯಟ್‌ನ ಪ್ರಾಂಶುಪಾಲರಾದ ಡಾ. ಅಶೋಕ್ ಕಾಮತ್ ಆಗಮಿಸಲಿದ್ದಾರೆ ಎಂದರು.

ಡಿ.27ರ ಶನಿವಾರ ಬೆಳಗ್ಗೆ 10:00ಕ್ಕೆ ಸಂಸ್ಥೆಯ 120ರ ಸಂಭ್ರಮದೊಂದಿಗೆ ‘ಬ್ಯಾರೀಸ್ ಉತ್ಸವ-2025’, ಸಂಸ್ಥಾಪಕರ ದಿನಾಚರಣೆ ಮತ್ತು ಶಾಲಾ ವಾರ್ಷಿಕೋತ್ಸವ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಹೊಸಕೋಟೆಯ ಶಾಸಕ ಹಾಗೂ ಕಿಯೋನಿಕ್ಸ್‌ನ ಅಧ್ಯಕ್ಷ ಶರತ್‌ಕುಮಾರ್ ಬಚ್ಚೇಗೌಡ ಉಪಸ್ಥಿತರಿರುವರು. ಅತಿಥಿಗಳಾಗಿ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ರಾಜ್ಯ ಸರಕಾರದ ವಿಷನ್ ಗ್ರೂಪ್ ಫಾರ್ ಹೈಯರ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್‌ನ ಸದಸ್ಯ ಅರುಣ್ ಸೀತಾರಾಮ್, ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್, ನಿವೃತ್ತ ಪ್ರಾದ್ಯಾಪಕ ಡಾ.ಸೋಮಶೇಖರ್ ಉಡುಪ, ಕರ್ನಾಟಕ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಬ್ಯಾರೀಸ್ ಗ್ರೂಫ್ ಆಫ್ ಇನ್‌ಸ್ಟಿಟ್ಯೂಟ್‌ನ ಟ್ರಸ್ಟಿ ಡಾ. ಆಸೀಪ್ ಬ್ಯಾರಿ ಮಾತನಾಡಿ, ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿರುವ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ‘ರಕ್ಷಣಾ ವಲಯದಲ್ಲಿ ವೃತ್ತಿ ಅವಕಾಶಗಳು ಮತ್ತು ತಯಾರಿ’ ಎಂಬ ಪ್ರೇರಣಾದಾಯಕ ಕಾರ್ಯಕ್ರಮವನ್ನು ಡಿ.28ರಂದು ಆಯೋಜಿಸಲಾಗುತ್ತಿದೆ ಎಂದರು.

ಈ ಕಾರ್ಯಕ್ರಮ ಭಾರತೀಯ ರಕ್ಷಣಾ ಸೇವೆಯಲ್ಲಿ ಗೌರವಾನ್ವಿತ ಮತ್ತು ಅರ್ಥಪೂರ್ಣ ವೃತ್ತಿ ಆಯ್ಕೆಮಾಡಲು ಆಸಕ್ತಿ ಹೊಂದಿರುವ ವಿವಿಧ ವಿದ್ಯಾ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶವನ್ನು ಹೊಂದಿದೆ. ಈ ಕಾರ್ಯಕ್ರಮವನ್ನು ಅನೀಸ್ ಡಿಫೆನ್ಸ್ ಕರಿಯರ್ ಇನ್‌ಸ್ಟಿಟ್ಯೂಟ್ ಪುಣೆ ಇದರ ಸಂಸ್ಥಾಪಕ ಮತ್ತು ನಿರ್ದೇಶಕ ಅನೀಸ್ ಕುಟ್ಟಿ ನಡೆಸಿಕೊಡಲಿದ್ದಾರೆ. 36 ವರ್ಷಕ್ಕಿಂತ ಹೆಚ್ಚು ಕಾಲ ರಕ್ಷಣಾ ವೃತ್ತಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿರುವ ಅನೀಸ್ ಕುಟ್ಟಿ ಅವರು ಸಾವಿರಾರು ವಿದ್ಯಾರ್ಥಿಗಳನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಸೇರುವಂತೆ ಪ್ರೇರೇಪಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದರು.

ಸೂಫಿ ಸಾಹೇಬರ ಬಳಿಕ ಅವರ ಪುತ್ರ ಹಾಜಿ ಕೆ. ಮೋಹಿದ್ದಿನ್ ಬ್ಯಾರಿ ಸಂಸ್ಥೆಯನ್ನು ನಡೆಸಿಕೊಂಡು ಬಂದರು. 1993ರಲ್ಲಿ ಹಾಜಿ ಕೆ ಮೊಹಿದ್ದೀನ್ ಬ್ಯಾರಿ ಎಜ್ಯುಕೇಶನ್ ಟ್ರಸ್ಟ್ ಸ್ಥಾಪನೆಯಾಯಿತು. ಇದರ ಸ್ಥಾಪಕಾಧ್ಯಕ್ಷರಾದ ದಿ.ಹಾಜಿ ಮಾಸ್ಟರ್ ಮೆಹಮೂದ್ ಅವರ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಬ್ಯಾರೀಸ್ ಸಂಸ್ಥೆ ಬೆಳಕಾಯಿತು. ಪ್ರಸ್ತುತ ಅಧ್ಯಕ್ಷರಾಗಿ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ಬ್ಯಾರಿ ಅವರ ಮುಂದಾಳತ್ವದಲ್ಲಿ, ಸಂಚಾಲಕ ಸೈಯದ್ ಮೊಹಮದ್ ಬ್ಯಾರಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ಮುನ್ನೆಡೆಯುತ್ತಿದೆ ಎಂದು ಅಶ್ವಿನಿ ಶೆಟ್ಟಿ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾರೀಸ್ ಗ್ರೂಫ್ ಆಫ್ ಇನ್‌ಸ್ಟಿಟ್ಯೂಷನ್‌ನ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್., ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್‌ನ ಎಚ್‌ಒಡಿ ಶ್ವೇತಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News