ಹಳ್ಳಿಹೊಳೆ ಗ್ರಾಪಂಗೆ ಶಾಸಕ ಮಂಜುನಾಥ ಭಂಡಾರಿ ಭೇಟಿ
ಕುಂದಾಪುರ, ಡಿ.24: ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಡಿ.24ರಂದು ಹಳ್ಳಿಹೊಳೆ ಗ್ರಾಪಂಗೆ ಭೇಟಿ ನೀಡಿ, ಇತ್ತೀಚೆಗೆ ಉದ್ಘಾಟನೆಗೊಂಡ ನೂತನ ಗ್ರಾಪಂ ಕಟ್ಟಡವನ್ನು ಪರಿಶೀಲಿಸಿ ಗ್ರಾಮಸ್ಥರ ಹಲವು ಮನವಿಗಳನ್ನು ಸ್ವೀಕರಿಸಿದರು.
ಹಳ್ಳಿಹೊಳೆಯಿಂದ ಬೈಂದೂರು ತಾಲೂಕು ಕೇಂದ್ರಕ್ಕೆ ಹೋಗುವ ಸರಕಾರಿ ಬಸ್‌ಗೆ ಬೇಡಿಕೆ, ಹಳ್ಳಿಹೊಳೆ ಕಮಲಶಿಲೆ ರಸ್ತೆಯ ಪಾರೆಯಲ್ಲಿ ರಸ್ತೆ ಅಭಿವೃದ್ಧಿಗೆ ವನ್ಯಜೀವಿ ವಿಭಾಗದಿಂದ ಆಕ್ಷೇಪದ ಬಗ್ಗೆ, ಶಾಡಬೇರುನಿಂದ ಮೂಡಹಿತ್ಲು ರಸ್ತೆ ಅಭಿವೃದ್ಧಿಗೆ ಮನವಿ, ಸುಮಾರು 25 ವರ್ಷದಿಂದ ಓಡಾಡುತ್ತಿದ್ದ ಉಡುಪಿ-ಹೈದರಾಬಾದ್ ಸರಕಾರಿ ಬಸ್ ಸಂಚಾರ ಸ್ಥಗಿತ ಗೊಂಡ ಬಗ್ಗೆ, ಮಡಾಮಕ್ಕಿ ಗ್ರಾಮದ ಬೆಪ್ದೆ ರಸ್ತೆ ಅಭಿವೃದ್ಧಿ ಬಗ್ಗೆ ಸ್ಥಳೀಯರು ಮಂಜುನಾಥ ಭಂಡಾರಿ ಅವರ ಬಳಿ ಮನವಿ ಮಾಡಿದ್ದು ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ಮಂಜುನಾಥ್ ಭಂಡಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಹಳ್ಳಿಹೊಳೆ ಗ್ರಾಪಂ ಅಧ್ಯಕ್ಷ ಮಂಜುನಾಥ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ, ಸದಸ್ಯರಾದ ಪ್ರದೀಪ ಕೊಠಾರಿ, ನೇತ್ರಾವತಿ, ಯು. ಪ್ರಭಾಕರ ನಾಯ್ಕ, ಸುಜಾತ ಬೋವಿ, ಉಡುಪಿ ಜಿಲ್ಲಾ ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪಕುಮಾರ್ ಶೆಟ್ಟಿ ಗುಡಿಬೆಟ್ಟು, ಮಾಜಿ ಅಧ್ಯಕ್ಷ ಸಂಜೀವ ಶೆಟ್ಟಿ ಸಂಪಿಗೇಡಿ ಉಪಸ್ಥಿತರಿದ್ದರು.
ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶಂಕರನಾರಾಯನ ಯಡಿಯಾಳ, ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯಕುಮಾರ ಶೆಟ್ಟಿ ಅಡಿಕೆಕೊಡ್ಲು, ತಾ.ಪಂ. ಮಾಜಿ ಸದಸ್ಯ ರಾಜು ಪೂಜಾರಿ ಹನ್ಕಿ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.