ಡಾ.ನಿರ್ಮಲ ಕುಮಾರಿ ಕಾಂಚೀಪುರಂ ವಿವಿ ಕಾನೂನು ಡೀನ್ ಆಗಿ ನೇಮಕ
Update: 2025-12-28 22:01 IST
ಉಡುಪಿ, ಡಿ.೨೮: ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದ ನಿರ್ದೇಶಕಿ ಪ್ರೊ.(ಡಾ.)ನಿರ್ಮಲ ಕುಮಾರಿ ಕಾಂಚೀಪುರಂನ ಚಂದ್ರಶೇಖರ ಸರಸ್ವತಿ ವಿಶ್ವವಿದ್ಯಾಲಯದ ಕಾನೂನು ಡೀನ್ ಆಗಿ ನೇಮಕಗೊಂಡಿದ್ದಾರೆ.
ನಿರ್ಮಲ ಕುಮಾರಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ.ಮತ್ತು ಎಲ್ಎಲ್ಎಂ ವಿದ್ಯಾಭ್ಯಾಸ ಮುಗಿಸಿ, ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿ ಪ್ರಾರಂಭಿಸಿದ್ದರು. ಕಾಲೇಜಿನಲ್ಲಿ ಶಿವಾಜಿ ಶೆಟ್ಟಿ ಅಣಕು ನ್ಯಾಯಾಲಯ ಸ್ಪರ್ಧೆಗಳನ್ನು 2007 ಮತ್ತು 2015ರಿಂದ ಪ್ರತಿವರ್ಷವೂ ಸಂಯೋಜಕರಾಗಿ ನಿರ್ವಹಿಸಿದ್ದರು.
ಪ್ರಾಂಶುಪಾಲರಾಗಿದ್ದಾಗ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಇಂಡಿಯಾ ಟುಡೆ ಪ್ರಕಾರ ಭಾರತದಲ್ಲೇ ಅತ್ಯಂತ ಕಡಿಮೆ ಶುಲ್ಕ ಪಡೆದು ಅತ್ಯುತ್ತಮ ವಿದ್ಯಾಭ್ಯಾಸ ಸಲ್ಲಿಸುವ ಕಾಲೇಜು ಎಂಬ ಶೀರ್ಷಿಕೆ ಯಡಿಯಲ್ಲಿನ ಸರ್ವೆಯಯಲ್ಲಿ ಪ್ರಥಮ ಸ್ಥಾನ ಪಡೆದಿತ್ತು.