ದೇವಾಡಿಗ ಸಮಾಜದ ಅಭಿವೃದ್ಧಿಗೆ ವಿಶೇಷ ಆದ್ಯತೆ: ಸಂಸದ ಬಿ.ವೈ.ರಾಘವೇಂದ್ರ
ಬೈಂದೂರು: ದೇವರಿಗೆ ತಲುಪುವ ಹಲವು ಯೋಜನೆಗಳು ದೇವರ ಸೇವೆ ಮಾಡುವ ದೇವಾಡಿಗ ಸಮಾಜಕ್ಕೆ ಸಿಗದಿದ್ದು ಮುಂದಿನ ದಿನಗಳಲ್ಲಿ ದೇವಾಡಿಗರ ಸಮಾಜ ಅಭಿವೃದ್ಧಿಗೆ ವಿಶೇಷ ಮಹತ್ವ ನೀಡ ಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಉಪ್ಪುಂದ ಮಾತ್ರಶ್ರೀ ಸಭಾಭವನದಲ್ಲಿ ರವಿವಾರ ನಡೆದ ಉಪ್ಪುಂದ ದೇವಾಡಿಗರ ಸಂಘದ ದಶಮ ಸಂಭ್ರಮ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಧಕರಿಗೆ ಸಮ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ದೇವಾಡಿಗ ಸಮಾಜ ಬಾಂಧವರ ಭಾಂದವ್ಯ ಮರೆಯಲಾಗದು, ಸಮಾಜ ಅಭಿವೃದ್ಧಿಗೆ ಜೊತೆಯಾಗಿ ಇರುತ್ತೇನೆ ಎಂದು ತಿಳಿಸಿದರು.
ವಿಶ್ವ ದೇವಾಡಿಗ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ದೇವಾಡಿಗ ಮಾತನಾಡಿ, ಮುಂದಿನ ದಿನಗಳಲ್ಲಿ ದೇವಾಡಿಗರ ಅಭಿವೃದ್ಧಿಗೆ ನಿಗಮ ಮಂಡಳಿ ರಚನೆ ಆಗಬೇಕು. ಇದಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಬಾರ್ಕೂರು ಶ್ರೀಏಕನಾಥೇಶ್ವರಿ ದೇವಸ್ಥಾನದ ವಿಶ್ವಸ್ಥ ಅಣ್ಣಯ್ಯ ಶೇರಿಗಾರ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಟ್ಟಡದ ನಿಧಿ ಬಿಡುಗಡೆಗೊಳಿಸಲಾಯಿತು. ಬೈಂದೂರು ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಎಂ.ಸುಕುಮಾರ್ ಶೆಟ್ಟಿ, ಬಾರ್ಕೂರು ಶ್ರೀಏಕನಾಥೇಶ್ವರಿ ದೇವಸ್ಥಾನದ ವಿಶ್ವಸ್ಥ ಎಚ್. ಮೋಹನದಾಸ್, ಮಂಗಳೂರು ಎಸ್.ಡಿ.ಎಂ. ಕಾಲೇಜು ನಿರ್ದೇಶಕ ಕಂಕನಾಡಿ ಡಾ.ದೇವರಾಜ್ ದೇವಾಡಿಗ, ಬೆಂಗಳೂರು ದೇವಾಡಿಗ ಸಂಘದ ಅಧ್ಯಕ್ಷ ರಮೇಶ ದೇವಾಡಿಗ ವಂಡ್ಸೆ, ಮಂಗಳೂರು ಕೆ.ಆರ್.ಡಿ.ಎಸ್., ಉಪಾಧ್ಯಕ್ಷ ಎಂ.ಎಚ್.ಕರುಣಾಕರ ದೇವಾಡಿಗ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಆಲೂರು ರಘುರಾಮ ದೇವಾಡಿಗ, ಏಕನಾಥೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಗಣೇಶ್ ದೇವಾಡಿಗ, ಮುಧೋಳ ಬಾಬು ದೇವಾಡಿಗ, ಉದ್ಯಮಿಗಳಾದ ನಾಗರಾಜ್ ಡಿ.ಪಡುಕೋಣೆ, ಹರೀಶ್ ದೇವಾಡಿಗ ಹಾಡಿಮನೆ, ಸಂಘದ ಗೌರವಾಧ್ಯಕ್ಷ ಬಿ.ಎ.ಮಂಜು ದೇವಾಡಿಗ, ಯು.ಎ. ಮಂಜು ದೇವಾಡಿಗ, ಇಂಜಿನಿಯರ್ ಮಂಜುನಾಥ ದೇವಾಡಿಗ, ಪ್ರಮೀಳಾ ದೇವಾಡಿಗ, ಕೃಷ್ಣ ದೇವಾಡಿಗ ಬೈಂದೂರು, ಸುಶೀಲಾ ದೇವಾಡಿಗ, ಗೌರಿ ದೇವಾಡಿಗ, ಪ್ರಿಯದರ್ಶಿನಿ ದೇವಾಡಿಗ, ಜಗದೀಶ ದೇವಾಡಿಗ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರವೀಂದ್ರ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಗೌರವಾಧ್ಯಕ್ಷ ಜನಾರ್ದನ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಾಮಕೃಷ್ಣ ದೇವಾಡಿಗ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ದೇವಾಡಿಗ ಮತ್ತು ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸುಧಾಕರ ದೇವಾಡಿಗ ವಂದಿಸಿದರು.