ಜ.17ರಂದು ಉಡುಪಿ ರೈಲು ನಿಲ್ದಾಣದಲ್ಲಿ ತುರ್ತು ಕಾಮಗಾರಿ: ಕೆಲ ರೈಲುಗಳ ಸಂಚಾರ ವ್ಯತ್ಯಯ
Update: 2026-01-16 21:36 IST
ಉಡುಪಿ, ಜ.16: ಕೊಂಕಣ ರೈಲು ಮಾರ್ಗದ ಉಡುಪಿ ರೈಲು ನಿಲ್ದಾಣದಲ್ಲಿ ಜ.17 ಶನಿವಾರದಂದು ಕೆಲವು ತುರ್ತು ಕಾಮಗಾರಿಗಳು ನಡೆಯಲಿರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಕಂಡು ಬರಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ನಂ.16335 ಗಾಂಧಿಧಾಮ- ನಾಗರಕೊಯಿಲ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಮಡಗಾಂವ್ ಜಂಕ್ಷನ್ ಹಾಗೂ ಉಡುಪಿ ನಡುವೆ 40 ನಿಮಿಷಗಳ ಕಾಲ ತಡೆಹಿಡಿಯಲಾಗುವುದು. ಅದೇ ರೀತಿ ರೈಲು ನಂ.22653 ತಿರುವನಂತಪುರ ಸೆಂಟ್ರಲ್ ಹಾಗೂ ಎಚ್.ನಿಝಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಸುರತ್ಕಲ್ ಹಾಗೂ ಉಡುಪಿ ನಡುವೆ 20 ನಿಮಿಷ ತಡೆ ಹಿಡಿಯಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸಂಚಾರ ವಿಸ್ತರಣೆ: ಈ ಮಾರ್ಗದಲ್ಲಿ ಸಂಚರಿಸುವ ರೈಲು ನಂ.02197 ಜಬಲಪುರ ಜಂಕ್ಷನ್- ಕೊಯಮತ್ತೂರು ಜಂಕ್ಷನ್ ಸಾಪ್ತಾಹಿಕ ವಿಶೇಷ ರೈಲಿನ ಸಂಚಾರವನ್ನು ಮಾ.6ರಿಂದ ಮುಂದಿನ ಡಿ.30ರವರೆಗೆ ವಿಸ್ತರಿಸಲಾ ಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.