×
Ad

ಕರ್ನಾಟಕ ಕರಾವಳಿಯ ರಾಷ್ಟ್ರೀಯ ಭದ್ರತೆ ಕುರಿತು ವಿಚಾರ ವಿನಿಮಯ

Update: 2023-08-09 20:20 IST

ಉಡುಪಿ: ಕರ್ನಾಟಕ ಕರಾವಳಿ ಕಾವಲು ಪೊಲೀಸ್‌ನ ಮಲ್ಪೆಯ ಕೇಂದ್ರ ಕಚೇರಿಯಲ್ಲಿ ಇಂದು ಎಸ್ಪಿ ಅಬ್ದುಲ್ ಅಹದ್ ಅವರ ಉಪಸ್ಥಿತಿಯಲ್ಲಿ ಮರ್ಚೆಂಟ್ ನೇವಿಯ ನಿವೃತ್ತ ಅಧಿಕಾರಿಗಳು ಮತ್ತು ಭಾರತೀಯ ನೌಕಾಸೇನೆ, ಭಾರತೀಯ ತಟರಕ್ಷಣಾ ಪಡೆಯಲ್ಲಿ ಪ್ರಸ್ತುತ ಕೆಲಸ ಮಾಡುತ್ತಿರುವ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಕರ್ನಾಟಕ ಕರಾವಳಿಯ ರಾಷ್ಟ್ರೀಯ ಭದ್ರತೆಯ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು.

ಮಂಗಳೂರು ಮರೈನ್ ಕಾಲೇಜಿನ ಉಪಪ್ರಾಂಶುಪಾಲರಾದ ಡಾಲ್ಸಿ ಪಿಂಟೋ ಹಾಗೂ ಇತರೇ ನಿವೃತ್ತ ಹಾಗೂ ಪ್ರಸ್ತುತ ಸೇವೆಯಲ್ಲಿರುವ ನೌಕಾಧಿಕಾರಿಗಳು ತಮ್ಮ ಕರ್ತವ್ಯದ ಸಮಯದಲ್ಲಿ ಅವರ ಬೇರೆ ಬೇರೆ ದೇಶಗಳ ಪ್ರಯಾಣದ ವೇಳೆ ಆದ ಅವರ ಅನುಭವಗಳನ್ನು ಹಾಗೂ ರಾಷ್ಟ್ರೀಯ ಭದ್ರತೆಯ ಕುರಿತ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸಭೆಯಲ್ಲಿ ಕರಾವಳಿ ಕಾವಲು ಪೊಲೀಸ್ ಘಟಕದ 9 ಠಾಣೆಗಳ ಪೊಲೀಸ್ ನಿರೀಕ್ಷಕರು ಹಾಗೂ ಉಪನಿರೀಕ್ಷಕರುಗಳು ಸಹ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News