×
Ad

ದೋಣಿಯೊಳಗೆ ಕುಸಿದು ಬಿದ್ದು ಮೀನುಗಾರ ಮೃತ್ಯು

Update: 2023-08-19 19:09 IST

ಬೈಂದೂರು, ಆ.19: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರರೊಬ್ಬರು ದೋಣಿಯಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ಕಿರಿಮಂಜೇಶ್ವರ ಬಳಿ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಉಪ್ಪುಂದ ತಾರಾಪತಿಯ ಪಾಳ್ಯದವರ ತೊಪ್ಲು ನಿವಾಸಿ ಗೋವಿಂದ ಖಾರ್ವಿ ಎಂಬವರ ಮಗ ಕುಮಾರ(44) ಎಂದು ಗುರುತಿಸಲಾಗಿದೆ. ಇವರು ಚಂಡಿಕಾ ದುರ್ಗಾಪರಮೇಶ್ವರಿ ದೋಣಿಯಲ್ಲಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದು, ಬಲೆಯನ್ನು ಎಳೆಯುತ್ತಿರುವಾಗ ದೋಣಿಯೊಳಗೆ ಕುಸಿದು ಬಿದ್ದರೆನ್ನ ಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಬೈಂದೂರು ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News