×
Ad

ಸೌಜನ್ಯ ಪರ ಪ್ರತಿಭಟನೆಗೆ ವಿರುದ್ಧ ಫ್ಲೆಕ್ಸ್: ಪ್ರಕರಣ ದಾಖಲು

Update: 2023-09-24 21:00 IST

ಕಾರ್ಕಳ, ಸೆ.24: ಕುಕ್ಕುಂದೂರು ಪಂಚಾಯತ್ ಮೈದಾನದಲ್ಲಿ ನಡೆಯುವ ಸೌಜನ್ಯ ಪರ ಪ್ರತಿಭಟನೆಗೆ ವಿರುದ್ಧವಾಗಿ ಕಾರ್ಕಳ ಪುರಸಭೆ ವ್ಯಾಪ್ತಿಯ ಹಲವು ಕಡೆ ಅನುಮತಿ ಪಡೆಯದೆ ಅಳವಡಿಸಲಾದ ಫ್ಲೆಕ್ಸ್‌ಗಳನ್ನು ಅಧಿಕಾರಿಗಳು ತೆರವುಗೊಳಿಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಅಪರಿಚಿತ ಕಿಡಿಗೇಡಿಗಳು ಸೆ.23ರಂದು ರಾತ್ರಿ ಕಾರ್ಕಳ ಪುರಸಭಾ ವ್ಯಾಪ್ತಿಯ ಆನೆಕೆರೆ ಉದ್ಯಾನವನದ ಬದಿಯಲ್ಲಿ, ದಾನಶಾಲೆ ಬಳಿ, ಪುಲ್ಕೇರಿ ಭವಾನಿ ಜಂಕ್ಷನ್ ಬಳಿ, ಆನೆಕೆರೆ ಶ್ರೀಕೃಷ್ಣಕ್ಷೇತ್ರದ ಬಳಿ ಪುರಸಭೆಯಿಂದ ಯಾವುದೇ ಅನುಮತಿ ಪಡೆಯದೆ ಸೌಜನ್ಯ ಪರ ಪ್ರತಿಭಟನೆ ಕಾರ್ಯಕ್ರಮಕ್ಕೆ ವಿರುದ್ಧವಾಗಿ ಫ್ಲೆಕ್ಸ್‌ಗಳನ್ನು ಅಳವಡಿಸಿರುವುದು ಕಂಡುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News