ಉಡುಪಿ ನಗರಸಭೆ ಮಾಜಿ ಉಪಾಧ್ಯಕ್ಷೆ ಇಂದಿರಾ ಶೇಖರ್ ನಿಧನ
Update: 2026-01-04 19:25 IST
ಉಡುಪಿ, ಜ.4: ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಕಲ್ಮಾಡಿಯ ಇಂದಿರಾ ಶೇಖರ್(68) ಜ.4ರಂದು ಹೃದಯಾಘಾತದಿಂದ ನಿಧನರಾದರು.
ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯೆಯಾಗಿದ್ದ ಅವರು ಸತತ ಎರಡು ಬಾರಿ ಬಿಜೆಪಿ ಪಕ್ಷದಿಂದ ಕಲ್ಮಾಡಿ ವಾರ್ಡ್‌ನ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಅವರು ಒಂದು ಬಾರಿ ನಗರಸಭೆ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು.
ಕಲ್ಮಾಡಿ ಉದಯಕಲಾ ಯುವಕ ಮಂಡಲ, ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಮಹಿಳಾ ಘಟಕ, ಕಲ್ಮಾಡಿ ಬಿಲ್ಲುಗುಡ್ಡೆ ಪಂಚದೈವ ಕ್ಷೇತ್ರ, ಕಲ್ಮಾಡಿ ಮಹಿಳಾ ಮಂಡಲ ಸೇರಿದಂತೆ ಹಲವಾರು ಸಂಘಟನೆಯಲ್ಲಿ ಸಕ್ರೀರಾಗಿದ್ದರು. ಮೃತರ ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಎ.ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭಾ ಸದಸ್ಯ ಸುಂದರ್ ಜೆ.ಕಲ್ಮಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.