×
Ad

ಜ.25ರಿಂದ ಉಡುಪಿಯಲ್ಲಿ ಫಲ - ಪುಷ್ಪ ಪ್ರದರ್ಶನ

Update: 2026-01-07 19:46 IST

ಉಡುಪಿ, ಜ.7: ತೋಟಗಾರಿಕಾ ಇಲಾಖೆ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಜನವರಿ 25ರಿಂದ 27ರವರೆಗೆ ದೊಡ್ಡಣ್ಣಗುಡ್ಡೆಯ ಶಿವಳ್ಳಿ ತೋಟಗಾರಿಕಾ ಕ್ಷೇತ್ರದ ರೈತ ಸೇವಾ ಕೇಂದ್ರದಲ್ಲಿ ಫಲ-ಪುಷ್ಪ ಪ್ರದರ್ಶನ ವನ್ನು ಹಮ್ಮಿಕೊಳ್ಳಲಾಗುವುದು.

ಈ ಫಲ-ಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕಾ ಚಟುವಟಿಕೆ ಹೊಂದಿರು ವವರಿಗೆ ಹಾಗೂ ಸಾವಯವ ಉತ್ಪನ್ನಗಳ ಮಳಿಗೆದಾರರಿಗೆ ಆದ್ಯತೆ ನೀಡಲಾ ಗುತ್ತಿದ್ದು, ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರ ಗಳ ಮಾರಾಟಗಾರರು, ತೋಟಗಾರಿಕೆಗೆ ಸಂಬಂಧಪಟ್ಟ ಉದ್ದಿಮೆ ದಾರರು, ಯಂತ್ರೋಪಕರಣಗಳ ಮಾರಾಟ ಗಾರರು, ಬ್ಯಾಂಕ್ ಹಾಗೂ ಆಹಾರ ಮಳಿಗೆದಾರರಿಗೆ 100 ಚದರ ಅಡಿ ಗಾತ್ರದ ಮಳಿಗೆಗೆ 3500 ರೂ. ದರ ನಿಗದಿ ಪಡಿಸಲಾಗಿದೆ.

ಮಳಿಗೆ ತೆರೆಯಲು ಬಯಸುವ ಆಸಕ್ತರು ಮಳಿಗೆಗಳ ಮೊತ್ತವನ್ನು ಆನ್‌ಲೈನ್ ಕ್ಯೂಆರ್ ಕೋಡ್ ಮೂಲಕ ರೈತ ಸೇವಾ ಕೇಂದ್ರದ ಖಾತೆಗೆ ಜನವರಿ 20ರೊಳಗೆ ಪಾವತಿಸಬಹುದು. ಹೆಸರು ನೋಂದಾಯಿಸಲು ಇಚ್ಛಿಸುವವರು ಸಹಾಯಕ ತೋಟಗಾರಿಕಾ ನಿರ್ದೇಶಕರ ದೂರವಾಣಿ ಸಂಖ್ಯೆ 9741255168 ಅನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News