×
Ad

ಇಸ್ಪೀಟು ಜುಗಾರಿ: ಮೂವರ ಬಂಧನ

Update: 2023-08-17 20:57 IST

ಕೋಟ, ಆ.17: ಮೊಳಹಳ್ಳಿ ಗ್ರಾಮದ ಮಾಸ್ತಿಕಟ್ಟೆ ಬಳಿಯ ಹಾಡಿಯಲ್ಲಿ ಆ.16ರಂದು ಇಸ್ಪೀಟ್ ಜುಗಾರಿ ಆಡುತ್ತಿದ್ದ ಮೂವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ಟಿಟಿ ರೋಡ್‌ನ ಮುನಾಫ್ (33), ಕಾಪು ಮಸೀದಿ ಹತ್ತಿರ ನಿವಾಸಿ ಪವನ್(19), ದಾವಣಗೆರೆಯ ಕೊಟ್ರೇಶ್ ಸರೋಣ(33) ಬಂಧಿತ ಆರೋಪಿಗಳು. ಉಳಿದ ಆರೋಪಿಗಳಾದ ಉದಯ ಶೆಟ್ಟಿ ಮೊಳಹಳ್ಳಿ, ವಿಜಯ ಮೊಳಹಳ್ಳಿ, ರಘುರಾಮ ಶೆಟ್ಟಿ ಮೊಳಹಳ್ಳಿ, ಗಣೇಶ್ ಮೊಳಹಳ್ಳಿ, ಮಂಜು ದೊಣಿ, ಅಕ್ಷಯ ಮುಲ್ಕಿ, ಮೊಹೀದ್ ಕಾರ್ನಾಡ್, ಶೇಖರ, ವಿಘ್ನೇಶ್ ದೇವಾಡಿಗ ಸೇರಿದಂತೆ ಹಲವು ಮಂದಿ ಪರಾರಿಯಾಗಿದ್ದಾರೆ. ಬಂಧಿತರಿಂದ ಎಂಟು ಮೊಬೈಲು ಹಾಗೂ 71,570ರೂ. ನಗದು ವಶಪಡಿಸಿ ಕೊಳ್ಳಲಾಗಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News