×
Ad

ಗಂಗೊಳ್ಳಿ: ಅಕ್ರಮ ಮರಳುಗಾರಿಕೆ ಆರೋಪ; ಐವರ ಬಂಧನ

Update: 2023-09-12 21:35 IST

ಗಂಗೊಳ್ಳಿ, ಸೆ.12: ಮೋವಾಡಿ ಎಂಬಲ್ಲಿನ ಸೌಪರ್ಣಿಕ ಹೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಸೆ.11ರಂದು ರಾತ್ರಿ ವೇಳೆ ದಾಳಿ ನಡೆಸಿದ ಗಂಗೊಳ್ಳಿ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರನ್ನು ಉತ್ತರ ಪ್ರದೇಶದ ಮೈನೇಜರ್(30), ದಿನೇಶ(22), ಜಿತೇಂದ್ರ ಕುಮಾರ್ (25), ಗುದ್ದು ಕುಮಾರ(20), ಆನಗೋಡು ನಿವಾಸಿ ಆಲ್ಟನ್(42) ಎಂದು ಗುರುತಿಸಲಾಗಿದೆ.

ಕೃತ್ಯಕ್ಕೆ ಬಳಿಸಿದ ತಲಾ 2 ಲಕ್ಷ ರೂಪಾಯಿ ಮೌಲ್ಯದ ಎರಡು ದೋಣಿ, 3,500ರೂ. ಮೌಲ್ಯದ ಒಂದು ಯುನಿಟ್ ಮರಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News