ಜಾಗತಿಕ ಸಹಾನುಭೂಮಿ -ಉಪಶಮಕ ಆರೈಕೆ ದಿನಾಚರಣೆ
Update: 2023-10-14 20:03 IST
ಉಡುಪಿ, ಅ.14: ಉಡುಪಿಯ ಲೋಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆಯ ವತಿಯಿಂದ ಜಾಗತಿಕ ಸಹಾನುಭೂಮಿ ಮತ್ತು ಉಪಶಮಕ ಆರೈಕೆ ದಿನಾಚರಣೆ ಕಾರ್ಯಕ್ರಮ ಇಂದು ಆಸ್ಪತ್ರೆಯ ಉಪಶಾಮಕ ಆರೈಕೆ ಕೇಂದ್ರ ವಾತ್ಸಲ್ಯ ಘಟಕದ ವಠಾರದಲ್ಲಿ ನಡೆಯಿತು.
ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ, ಲಯನ್ಸ್ ಕ್ಲಬ್ ಉಡುಪಿ- ಚೇತನ ಅಧ್ಯಕ್ಷ ಜಗದೀಶ್ ಆಚಾರ್ಯ, ಉದ್ಯಮಿ ಮಧುಸೂದನ್ ಹೇರೂರು ಮಾತನಾಡಿದರು. ಈ ಸಂದರ್ಭದಲ್ಲಿ ವಾತ್ಸಲ್ಯ ಘಟಕಕ್ಕೆ ಉಪಯುಕ್ತ ಪರಿಕರ ಗಳನ್ನು ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಜಯಂಟ್ಸ್ ಬ್ರಹ್ಮಾವರ ಅಧ್ಯಕ್ಷ ಮಿಲ್ಟನ್ ಒಲಿವೇರಾ, ಕಾರ್ಯದರ್ಶಿ ವಿವೇಕ್ ನಾಯಕ್, ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಗಣೇಶ್ ಕಾಮತ್ ಉಪಸ್ಥಿತರಿದ್ದರು. ಹೇಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮುದಾಯ ಘಟಕದ ಮುಖ್ಯಸ್ಥ ರೋಹಿ ರತ್ನಾಕರ್ ವಂದಿಸಿದರು.