×
Ad

ಹೆಬ್ರಿ: ಈಜಿಕೊಂಡು ಹೊಳೆ ದಾಟಿ ವಿದ್ಯುತ್ ಸಮಸ್ಯೆ ಬಗೆಹರಿಸಿದ ಮೆಸ್ಕಾಂ ಸಿಬ್ಬಂದಿ

Update: 2024-09-26 14:52 IST

ಹೆಬ್ರಿ: ವಿದ್ಯುತ್ ತಂತಿ ತುಂಡಾಗಿದ್ದರಿಂದ ಹೆಬ್ರಿ ತಾಲೂಕಿನ ಶಿವಪುರ ಮೂಡ್ಸಾಲಿನಲ್ಲಿ ಕೆಲದಿನಗಳಿಂದ ವಿದ್ಯುತ್ ವ್ಯತ್ಯಯವಾಗಿತ್ತು. ಈ ಹಿನ್ನೆಲೆಯಲ್ಲಿ ಮೆಸ್ಕಾಂ ಸಿಬ್ಬಂದಿ ಹೊಳೆಯಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ಸಮಸ್ಯೆ ಸರಿಪಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೆಬ್ರಿ ಶಾಖೆಯ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಈ ರೀತಿ ಸಾಹಸವಾಗಿ ಕರ್ತವ್ಯ ನಿರ್ವಹಿಸಿದವರು.

ಶಿವಪುರ ಮೂಡ್ಸಾಲಿನಿಂದ ಕರೆ ಮಾಡಿದ ಸ್ಥಳೀಯರು ತಮ್ಮ ಏರಿಯಾದಲ್ಲಿ ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ದೂರು ನೀಡಿದ್ದರು. ಆದರೆ ಅಲ್ಲಿಗೆ ಹೋಗಬೇಕಿದ್ದರೆ ಹೊಳೆ ದಾಟಬೇಕಿತ್ತು. ಊರವರ ಸಮಸ್ಯೆ ಅರಿತ ಸಿಬ್ಬಂದಿ ಪ್ರಮೋದ್ ಈಜಿಕೊಂಡೇ ಹೊಳೆ ದಾಟಿ ಹೋಗಿ ದುರಸ್ತಿ ಕಾರ್ಯ ಮಾಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಸಮಸ್ಯೆ ಬಗೆಹರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.

ಪ್ರಮೋದ್ ಹೊಳೆ ದಾಟಿ ಬಂದ ಸಿಬ್ಬಂದಿಯ ವೀಡಿಯೋ ಸೆರೆ ಹಿಡಿದ ಸ್ಥಳೀಯರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಸಾರ್ವಜನಿಕವಾಗಿ ಪ್ರಶಂಸೆ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News