ಮನೆಗೆ ನುಗ್ಗಿ ಚಿನ್ನಾಭರಣ ಕಳವು: ಸಂಬಂಧಿಕರ ವಿರುದ್ಧ ದೂರು ದಾಖಲು
Update: 2026-01-25 17:49 IST
ಪಡುಬಿದ್ರಿ: ಸಂಬಂಧಿಕರು ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವುದಾಗಿ ಆರೋಪಿಸಿ ಹೆಜಮಾಡಿ ಕೋಡಿಯ ರಜನಿ ನೀಡಿದ ದೂರಿನಂತೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಜನಿ ಉದ್ಯೋಗದ ನಿಮಿತ್ತ ಮುಂಬೈನಲ್ಲಿ ವಾಸವಾಗಿದ್ದು ಜ.21ರಂದು ಸಂಜೆ ಅವರ ಸಂಬಂದಿಕರಾಧ ರೇಖಾ ಕಾಂಚನ್, ಹೇಮಲತಾ ಕೋಟ್ಯಾನ್, ದೇವದಾಸ್ ಕಾಂಚನ್, ರೋಹಿತ್ ಕೋಟ್ಯಾನ್, ಧನರಾಜ್ ಕಾಂಚನ್, ಹಾಗೂ ಶ್ರೀಶ ಕೋಟ್ಯಾನ್ ಎಂಬವರು ಕೀ ಮೇಕರ್‌ನ್ನು ಕರೆದುಕೊಂಡು ಬಂದು ಮನೆಯ ಬಾಗಿಲನ್ನು ಒಡೆದು ಒಳನುಗ್ಗಿರುವುದು ಸಿಸಿ ಕ್ಯಾಮರಾ ದಲ್ಲಿ ಕಂಡುಬಂದಿದೆ.
ರಜನಿ ಮನೆಗೆ ಬೀಗ ಹಾಕಿ ಹೋಗುವಾಗ ಮನೆಯಲ್ಲಿ ಇಟ್ಟಿದ್ದ 6,65,000ರೂ. ಮೌಲ್ಯದ ಚಿನ್ನದ ಮಂಗಳ ಸೂತ್ರ, ಉಂಗುರ, ಚಿನ್ನದ ಚೈನ್ ಹಾಗೂ 1,27,000ರೂ. ಮೌಲ್ಯದ ಬೆಳ್ಳಿಯ ಚೆಂಬು, ಬೆಳ್ಳಿಯ ತಟ್ಟೆಗಳು, ಬೆಳ್ಳಿಯ ದೇವರ ಸಾಮಗ್ರಿಗಳು, ಬೆಳ್ಳಿಯ ದೀಪಗಳು ಹಾಗೂ 12,000ರೂ. ನಗದು ಹಣವನ್ನು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.