×
Ad

ಗಂಗೊಳ್ಳಿ ಕಟ್ಟಡ ಕಾರ್ಮಿಕರ ಘಟಕ ಕಚೇರಿ ಉದ್ಘಾಟನೆ

Update: 2023-09-24 20:31 IST

ಕುಂದಾಪುರ, ಸೆ.24: ಗಂಗೊಳ್ಳಿ ಅಂಚೆ ಕಚೇರಿ ಬಳಿ ಆರಂಭಿಸಲಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಗಂಗೊಳ್ಳಿ ಘಟಕದ ಕಚೇರಿಯನ್ನು ಸರಕಾರಿ ಆಯುರ್ವೇದ ವೈದ್ಯಾಧಿಕಾರಿ ಡಾ.ವೀಣಾ ಕಾರಂತ್ ರವಿವಾರ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ ಮಾತನಾಡಿ, ಕಾರ್ಮಿಕರ ಸಂಘಟನೆಗಳ ಬೆಳವಣಿಗೆಯಿಂದ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ಗಂಗೊಳ್ಳಿ ಗ್ರಾಮದ ಸಮಸ್ತ ದುಡಿಯುವ ವರ್ಗಕ್ಕೆ ಈ ಕಚೇರಿ ಜೀವಂತ ಸೇವೆ ಮಾಡುವಂತಾಗಲಿ ಗಂಗೊಳ್ಳಿ ಘಟಕದ ಕೆಲಸ ಶ್ಲಾಘನೀಯ ಎಂದು ಹೇಳಿದರು.

ಸ್ಥಳೀಯ ಸಮಾಜ ಸೇವಕ ಗೋಪಾಲ ಚಂದನ್ ವೇದಿಕೆಯಲ್ಲಿದ್ದರು. ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಗೌರವಾಧ್ಯಕ್ಷರು ಹಾಗೂ ಗಂಗೊಳ್ಳಿ ಘಟಕದ ಅಧ್ಯಕ್ಷ ಚಿಕ್ಕ ಮೊಗವೀರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯಲ್ಲಿ ಗೋಪಾಲ ಬಿಲ್ಲವ, ಸುಧಾಕರ ಪೂಜಾರಿ, ಉದಯ ಶೆಟ್ಟಿಗಾರ್, ಚಂದ್ರಶೇಖರ, ದಿನಕರ ಸೀತಾರಾಮ ದೇವಾಡಿಗ, ಅಭಿನಂದನ್, ಸರಸ್ವತಿ, ಕಮಲ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News