×
Ad

ಸೆ.7ರಂದು ಕೊಪ್ಪಲಂಗಡಿಯಲ್ಲಿ ಸರ್ವಸುಸಜ್ಜಿತ, ಆಧುನಿಕ ಸೌಲಭ್ಯಗಳ ‘ಇನಾಸನ್ ಆಡಿಟೋರಿಯಂ’ ಉದ್ಘಾಟನೆ

Update: 2025-09-04 19:52 IST

ಉಡುಪಿ, ಸೆ.4: ಕಾಪು ಕೊಪ್ಪಲಂಗಡಿಯ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ ನೂತನವಾಗಿ ನಿರ್ಮಾಣಗೊಂಡಿ ರುವ ಸರ್ವಸುಸಜ್ಜಿತ ಹಾಗೂ ಆಧುನಿಕ ಸೌಲಭ್ಯಗಳಿಂದ ಕೂಡಿದ ಭವ್ಯ ಸಭಾಂಗಣ ‘ಇನಾಸನ್ ಆಡಿಟೋರಿಯಂ’ ಸೆ.7ರಂದು ಬೆಳಗ್ಗೆ 11.30ಕ್ಕೆ ಉದ್ಘಾಟನೆಗೊಳ್ಳಲಿದೆ.

ಈ ಸಭಾಂಗಣದ ಮುಖ್ಯ ಹಾಲ್‌ನಲ್ಲಿ 1,500 ಮಂದಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಇನ್ನೂ 1,500 ಮಂದಿಗೆ ಮಹಿಳೆಯರಿಗಾಗಿ ಪ್ರತ್ಯೇಕ ಬಾಲ್ಕನಿ ವ್ಯವಸ್ಥೆ ಮಾಡಲಾಗಿದೆ. ಇದು ಈ ಸಭಾಂಗಣದ ವೈಶಿಷ್ಟ್ಯವಾಗಿದೆ. 4,000 ಚದರ ಅಡಿ ವಿಸ್ತ್ರೀರ್ಣದ ಭವ್ಯವಾದ ಪ್ರವೇಶ ದ್ವಾರ, ಆತ್ಮೀಯ ಕೂಟಗಳಿಗೆ ಅನುಕೂಲವಾಗುವ ರೀತಿಯ 300 ಮಂದಿಗೆ ಕುಳಿತುಕೊಳ್ಳಲು ಸಾಮರ್ಥ್ಯ ಇರುವ ಮಿನಿ ಹಾಲ್, ಚರ್ಚೆಗಳಿಗೆ ಅನುಕೂಲವಾದ ಕಾನ್ಫರೆನ್ಸ್ ರೂಂಗಳು ಕೂಡ ಇವೆ.

ಒಟ್ಟು 30,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಎರಡು ಭೋಜನ ಭವನಗಳು, ಪೂರ್ಣಸಜ್ಜಿತ ಅಡುಗೆ ಮನೆಗಳು, ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ನಮಾಜ್ ಕೊಠಡಿಗಳು, ಹೈ-ಕ್ಯಾಪಾಸಿಟಿ ಲಿಫ್ಟ್‌ಗಳು ಹಾಗೂ 250 ವಾಹನಗಳಿಗೆ ಅನುಕೂಲವಾಗುವ ಪಾರ್ಕಿಂಗ್ ವ್ಯವಸ್ಥೆಗಳನ್ನು ಈ ಸಭಾಂಗಣ ಒಳಗೊಂಡಿದೆ.

ಈ ಸೌಲಭ್ಯಗಳು ಇಂದಿನ ಅಗತ್ಯಗಳನ್ನು ಮಾತ್ರವಲ್ಲ, ಮುಂದಿನ ತಲೆಮಾರುಗಳಿಗೂ ಸೇವೆ ಮಾಡಲು ನಿರ್ಮಿಸ ಲಾಗಿದೆ. ಮುಂದೆ ಇನ್ನಷ್ಟು ಸೌಲಭ್ಯಗಳನ್ನು - ಮುಕ್ತಾಂಗಣ, ಈಜುಕೊಳ ಮತ್ತು ವಸತಿ ಕೊಠಡಿ ವ್ಯವಸ್ಥೆ ಅಭಿವೃದ್ಧಿ ಪಡಿಸುವ ಯೋಜನೆ ಕೂಡ ಇದೆ ಎಂದು ಇನಾಸನ್ ಆಡಿಟೋರಿಯಂ ಅಧ್ಯಕ್ಷ ಮುಹಮ್ಮದ್ ಸಾದಿಕ್ ತಿಳಿಸಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಅಸ್ಲಂ ಕಾಜಿ, ಅಬ್ದುಲ್ ಜಲೀಲ್, ಧಾರ್ಮಿಕ ಮುಖಂಡ ಮುಸ್ತಫಾ ಅಸಾದಿ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಎಸ್‌ಡಿಪಿಐ ಅಧ್ಯಕ್ಷ ಆಸಿಫ್ ಕೋಟೇಶ್ವರ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ಶೆಟ್ಟಿ ಭಾಗವಹಿಸಲಿರು ವರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಶುಭ ಹಾರೈಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News