ಕುಕ್ಕುಂದೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ
ಕಾರ್ಕಳ: ಹೈನುಗಾರಿಕೆಯನ್ನು ಪ್ರೊತ್ಸಾಹಿಸುವ ನಿಟ್ಟಿನಲ್ಲಿ ಎರಡು ಪಶುಗಳನ್ನು ಹೊಂದಿ ಹೈನುಗಾರಿಕೆ ಮಾಡುವ ಮಹಿಳೆಯರಿಗೆ ಸರಕಾರದಿಂದ ತಿಂಗಳಿಗೆ ೫ ಸಾವಿರ ಪ್ರೋತ್ಸಾಹ ಧನ ದೊರೆಯುವಂತಾಗಬೇಕು, ಆ ಮೂಲಕ ಹೈನುಗಾರಿಕೆಯೂ ಬೆಳೆಯುತ್ತದೆ. ಇದರೊಂದಿಗೆ ಆದಾಯವು ಹೆಚ್ಚಗುತ್ತದೆ ಈ ನಿಟ್ಟಿನಲ್ಲಿ ಅಧಿವೇಶನ ಸಂದರ್ಭದಲ್ಲಿ ಸರಕಾರಕ್ಕೆ ಮನವರಿಕೆ ಮಾಡಲಾಗಿದ್ದು ಈ ಬಗ್ಗೆ ಸರಕಾರ ಚಿಂತನೆ ಮಾಡಬೇಕಾಗಿದೆ ಮುಂದಿನ ದಿನಗಳಲ್ಲಿ ನಮ್ಮ ಸರಕಾರ ಬಂದರೆ ಈ ರೀತಿಯಲ್ಲಿ ಚಿಂತನೆ ಮಾಡಲಾಗುವುದು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.
ಕುಕ್ಕುಂದೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಗೋಕುಲ ಇದರ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಸಹಕಾರಿ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಲು ಸ್ವಂತ ಕಟ್ಟಡ ಇದ್ದಾಗ ಮಾತ್ರ ಸಾಧ್ಯ. ತನ್ನ ಶಾಸಕ ನಿಧಿಯಿಂದ ೫ ಲಕ್ಷ, ಒಕ್ಕೂಟದಿಂದ ಹಾಗೂ ದಾನಿಗಳ ಸಹಕಾರವನ್ನು ಬಳಸಿಕೊಂಡು ಇಂದು ಸ್ವಂತ ಕಟ್ಟಡ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಸಂಘವು ೫೦೦ ಲೀ ಹಾಲು ಸಂಗ್ರಹಿಸುವ ಗುರಿ ಇರಿಸಿಕೊಂಡಿರು ವುದು ಅಭಿವೃದ್ಧಿಯ ಸಂಕೇತವಾಗಿದೆ. ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಗೆ ಹತ್ತಾರು ಸವಾಲುಗಳಿವೆ, ಇದರ ನಡುವೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಕೆಲಸ ಸರಕಾರ ಮಾಡುತ್ತಿದೆ, ಮಂಗಳೂರು ಒಕ್ಕೂಟವು ಎಲ್ಲಾ ಸಂಘಗಳಿಗೆ ಬೆನ್ನೆಲುಬಾಗಿ ನಿಂತುಕೊಂಡು ಸಹಕರಿಸುತ್ತಿರುವುದರಿಂದ ರಾಜ್ಯದಲ್ಲಿ ಮಾದರಿ ಒಕ್ಕೂಟವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಬಳಗವೂ ದೊಡ್ಡದಾಗಬೇಕು ಹೈನುಗಾರಿಕೆ ಯಿಂದ ವಿಮುಖರಾಗುತ್ತಿದ್ದೇವೆ ಎನ್ನುವ ಮಾತುಗಳು ಕೇಳಿಬರುತ್ತಿರುವ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಮನೆಯಲ್ಲಿ ಗೋವನ್ನು ಸಾಕುವ ಪದ್ಧತಿ ಬೆಳೆಸಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾಮರಾಯ ನಾಯಕ್ ವಹಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಸಂಘವು 500 ಲೀ ಹಾಲು ಸಂಗ್ರಹಿಸುವ ಗುರಿ ಇರಿಸಿಕೊಂಡಿದೆ ಇದಕ್ಕಾಗಿ ಹೈನುಗಾರರು ಸಹಕರಿಸುವಂತೆ ತಿಳಿಸಿದರು. ಕಟ್ಟಡಕ್ಕೆ ದೇಣಿಗೆ ನೀಡಿದ ಸರ್ವರಿಗೂ ಕೃತಜ್ಙತೆ ಸಲ್ಲಿಸಿದರು.
ದ.ಕ. ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಕೊಡವೂರು ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಒಂದು ಹಂತದಲ್ಲಿ ಒಕ್ಕೂಟವು ಹಾಲಿನ ಸಂಗ್ರಹಣೆಯಲ್ಲಿ ಸುಮಾರು ೩.೪೦ಲಕ್ಷ ಲೀ ಸರಸರಿ ಕುಸಿತ ಕಂಡಿತ್ತು ಆದರೆ ಇತ್ತಿಚೇಗೆ ಸುಮಾರು ೪.೩೦ ಲಕ್ಷ ಲೀ ಸಂಗ್ರಹಣೆಯಲ್ಲಿ ಏರಿಕೆಯಾಗಿದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹೈನುಗಾರಿಕೆಗೆ ಹಾಗೂ ಸಹಕಾರಿ ಸಂಘಗಳ ಕಟ್ಟಡಕ್ಕೆ ಹೆಚ್ಚಿನ ಅನುದಾನಮ ನೀಡಿ ಪ್ರೊತ್ಸಾಹಿಸುತ್ತ ಬರುತ್ತಿರುವುದು ಅಭಿನಂದನೀಯವೆಂದರು. ದ. ಕ. ಹಾಲು ಉತ್ಪಾದಕರ ಒಕ್ಕೂಟವು ಇಡೀ ರಾಜ್ಯದಲ್ಲೇ ಹಾಲು ಉತ್ಪಾದಕರಿಗೆ ಅತೀ ಹೆಚ್ಚು ದರ ನೀಡಿ ಹೈನುಗಾರರನ್ನು ಪ್ರೋತ್ಸಾಹಿಸಿಸುತ್ತಿದೆ ಎಂದರು
ದ.ಕ. ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಉಪಾಧ್ಯಕ್ಷರಾದ ಉದಯ ಎಸ್. ಕೋಟ್ಯಾನ್, ನಿರ್ದೇಶಕರಾದ ಸುಧಾಕರ ಶೆಟ್ಟಿ ಮುಡಾರು, ಕೆ. ಶಿವಮೂರ್ತಿ, ಶ್ರೀಮತಿ ಮಮತಾ ಆರ್. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ್ ಡಿ., ಶೇಖರಣೆ ಮತ್ತು ತಾಂತ್ರಿಕ ವಿಭಾಗ ಉಪವ್ಯವಸ್ಥಾಪಕರಾದ ಡಾ| ಮಾಧವ್ ಐತಾಳ್, ಹಿರ್ಗಾನ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ, ಶ್ರೀ ಕ್ಷೇ. ಧ. ಗಾ.ಯೋಜನೆಯ ಮೇಲ್ವಿಚಾರಕರಾದ ಮಂಜುನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಈ ಸಂಧರ್ಭದಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಪ್ರಸಾದ ಐಸಿರ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸ್ಥಾಪಕ ಅಧ್ಯಕ್ಷ ರವಿ ಶೆಟ್ಟಿ ಸ್ವಾಗತಿಸಿ, ಸಂಘದ ನಿರ್ದೇಶಕಿ ಶಶಿಕಲ ಪ್ರಾರ್ಥಿಸಿದರು. ಕಾರ್ಯದರ್ಶಿ ಐಶ್ವರ್ಯ ವರದಿ ಮಂಡಿಸಿದರು. ಉಪಾಧ್ಯಕ್ಷರಾದ ರಘುನಾಥ ಶೆಟ್ಟಿ ವಂದಿಸಿದರು.