×
Ad

ತಪೋವನದಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ಪರ್ಧೆಗಳು

Update: 2023-08-11 21:59 IST

ಮಣಿಪಾಲ, ಆ.11: ಮಣಿಪಾಲ್ ಯೂನಿವರ್ಸಲ್ ಪ್ರೆಸ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ತಪೋವನ ಮಣಿಪಾಲ ಇವುಗಳ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ‘ರಾಷ್ಟ್ರಭಕ್ತಿ’ ಎಂಬ ವಿಷಯದ ಮೇಲೆ ಮಕ್ಕಳಿಗಾಗಿ ಚಿತ್ರಕಲೆ, ಸಂಗೀತ ಮತ್ತು ಕಥೆ ಹೇಳುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಮಣಿಪಾಲದ ತಪೋವನ ಲೈಫ್ ಸ್ಪೇಸ್‌ನಲ್ಲಿ ಆ.13ರ ರವಿವಾರ ಬೆಳಗ್ಗೆ 10 ಗಂಟೆಗೆ ಸ್ಪರ್ಧೆ ಆರಂಭಗೊಳ್ಳಲಿವೆ. ಪ್ರತಿ ಸ್ಪರ್ಧೆಯಲ್ಲಿಯೂ 1ರಿಂದ 3, 4ರಿಂದ 7 ಮತ್ತು 8ರಿಂದ 10ನೆಯ ತರಗತಿಯವರೆಗಿನ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಆಸಕ್ತ ವಿದ್ಯಾರ್ಥಿಗಳು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಳಿಗಾಗಿ ಭಾವನಾ ಭಟ್ (6364919422), ಮಹೇಶ ಮಲ್ಪೆ (8660637172) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಪೋವನದ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News