Karkala | ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಬಸ್ ನಡುವೆ ಅಪಘಾತ
ಕಾರ್ಕಳ : ಕಾರ್ಕಳ ಸಮೀಪದ ಸಾಣೂರಿನಲ್ಲಿ ಮಾಜಿ ಸಚಿವ ರಮನಾಥ ರೈ ಅವರಿದ್ದ ಕಾರಿಗೆ ಬಸ್‌ವೊಂದು ಢಿಕ್ಕಿಯಾಗಿದೆ.
ಕಾರ್ಕಳದಿಂದ ಮಂಗಳೂರಿಗೆ ಹೋಗುವ ಖಾಸಗಿ ಬಸ್, ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ರಮಾನಾಥ ರೈ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರು ಚಾಲಕ ಹಾಗೂ ಅವರ ಪಿಎಗೆ ಗಾಯಗಳಾಗಿದೆ. ಗಾಯಾಳುಗಳು ಕಾರ್ಕಳದ ಟಿಎಂಎ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.