×
Ad

ಕಾರ್ಕಳ: ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಸಂವಾದ ಕಾರ್ಯಕ್ರಮ

Update: 2024-02-07 12:07 IST

ಕಾರ್ಕಳ: ಜಮಾತೇ ಇಸ್ಲಾಮಿ ಹಿಂದ್ ಕಾರ್ಕಳ ವತಿಯಿಂದ ವಿದ್ಯಾರ್ಥಿಗಳು ಮತ್ತು ಹೆತ್ತವರೊಂದಿಗೆ ಸಂವಾದ ಕಾರ್ಯಕ್ರಮ  ಇತ್ತೀಚೆಗೆ  ಮದೀನಾ ಮಸೀದಿ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಬಿ.ಐ.ಇ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್, " ಹೆತ್ತವರು ಮಕ್ಕಳ ಲೌಕಿಕ ಯಶಸ್ಸಿಗಾಗಿ ಪ್ರಯತ್ನಿಸುವಂತೆ ಅವರ ಪರಲೋಕದ ವಿಜಯಕ್ಕಾಗಿಯೂ ಅಷ್ಟೇ ಗಮನವನ್ನು ನೀಡಬೇಕು.   ಪಾಲಕರು ಇಸ್ಲಾಮೀ ಶಿಕ್ಷಣದ ಬೆಳಕಿನಡಿಯಲ್ಲಿ ತಮ್ಮ ಮಕ್ಕಳನ್ನು ತರಬೇತಿಗೊಳಿಸಬೇಕು ಎಂದರು.

ಕಾರ್ಯಕ್ರಮವು ಮುಫ್ತಿ ಅಬೂ ಶಮಾ ಅವರ ಕುರ್ʼಆನ್ ಉದ್ಭೋದನೆ ಯೊಂದಿಗೆ ಪ್ರಾರಂಭಗೊಂಡಿತು. SIO ಉಡುಪಿ ಜಿಲ್ಲಾಧ್ಯಕ್ಷ ಶೇಖ್ ಅಯಾನ್ ಪ್ರಸ್ತಾವಿಕ ಭಾಷಣಗೈದರು.

ಹುಮೇರಾ ಕಾರ್ಕಳ ಕಾರ್ಯಕ್ರಮವನ್ನು ನಿರೂಪಿಸಿ,  ಧನ್ಯವಾದ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News