ಕಾರ್ಕಳ: ಮೆಸ್ಕಾಂ ಅಧಿಕಾರಿ ಗಿರೀಶ್ ರಾವ್ ಮನೆ, ಲಾಡ್ಜ್ ಮೇಲೆ ಲೋಕಾಯುಕ್ತ ದಾಳಿ
Update: 2025-05-31 12:15 IST
ಕಾರ್ಕಳ: ಮೆಸ್ಕಾಂನಲ್ಲಿ ಅಕೌಂಟ್ಸ್ ಆಫಿಸರ್ (ಎಒ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಕಳದ ಹಿರಿಯಂಗಡಿ ಗಿರೀಶ್ ರಾವ್ ಮನೆ ಹಾಗೂ ಪುಲ್ಕೇರಿ ಬೈಪಾಸ್ ನಲ್ಲಿರುವ ಒಡೆತನದ ಕಾರ್ಕಳ ಇನ್, ಹೊಟೇಲ್ ಅನಘಾ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.
ಶನಿವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಎಸ್ ಪಿ ಕುಮಾರಚಂದ್ರ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಹಣ, ಆಸ್ತಿ, ಇತರೆ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.