ಕಾರ್ಕಳ : ಶ್ರೀ ಕ್ಷೇತ್ರ ಶ್ರವಣಬೆಳಗೊಳ ಮಹಾಸಂಸ್ಥಾನ ದಿಗಂಬರ ಶ್ರೀ ಜೈನ ಮಠದ ಸ್ವಸ್ತಿಶ್ರೀ ಶ್ರೀಮದಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಪಟ್ಟಾಭಿಷಿಕ್ತರಾದ ಬಳಿಕ ಪ್ರಥಮ ಬಾರಿ ಶ್ರೀ ಕ್ಷೇತ್ರ ಕಾರ್ಕಳಕ್ಕೆ ರವಿವಾರ ಆಗಮಿಸಿದ್ದಾರೆ.

ಸ್ವಾಮೀಜಿಯವರ ಪುರಪ್ರವೇಶವು ಕಾರ್ಕಳ ಆನೆಕೆರೆ ವ್ರತ್ತದಿಂದ ನಡೆಯಿತು. ಪೂರ್ಣಕುಂಭ, ಕಲಶ, ಮಂಗಳವಾದ್ಯಗಳೊಂದಿಗೆ ಸ್ವಾಮೀಜಿಯನ್ನು ಸ್ವಾಗತಿಸಿ ದಾನಶಾಲೆ ಶ್ರೀ ಕ್ಷೇತ್ರ ಜೈನ ಮಠಕ್ಕೆ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭ ಎಲಾಚಾರ್ಯ 108 ಶ್ರೀ ಪ್ರಸಂಗ ಸಾಗರ ಮುನಿ ಮಹಾರಾಜ, ಕಾರ್ಕಳ ಶ್ರೀ ಕ್ಷೇತ್ರ ಜೈನ ಮಠದ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್, ಕೋಶಾಧಿಕಾರಿ ಮೋಹನ್ ಪಡಿವಾಳ್ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಗೋಳಿ, ಹಿರಿಯ ಉಪಾಧ್ಯಕ್ಷ ಅನಂತರಾಜ್ ಪೂವಣಿ, ಉದ್ಯಮಿಗಳಾದ ಮಹೇಂದ್ರ ವರ್ಮ, ಮಹಾವೀರ ಹೆಗ್ಡೆ, ಸಂಪತ್ ಕುಮಾರ್ ಜೈನ್ , ಸಿಎ ಪ್ರಭಾತ್ ಕುಮಾರ್, ಶೀತಲ್ ಜೈನ್, ರತ್ನವರ್ಮ ಜೈನ್, ಪದಾಧಿಕಾರಿಗಳು ಹಾಗೂ ಜೈನ ಧರ್ಮ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor