ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ
ಕಾರ್ಕಳ: ಪಿರ್ಯಾದಿದಾರರಾದ ಎಲಿಜಬೆತ್ (45), ಉಡುಪಿ ಕರಾವಳಿ ಬೈಪಾಸ್ ನಿವಾಸಿ ಸಂತೋಷ ನಾಯಕ್ (46) ಎಂಬವರು ಕಾರ್ಕಳದ ಹೋಟೆಲಿಗೆ ಕೆಲಸಕ್ಕೆ ಸೇರಿರುವುದಾಗಿ ಹೇಳಿ ನ.17ರಂದು ಸಂಜೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ತಗ್ಗರ್ಸೆ ಗ್ರಾಮದ ಲಕ್ಷ್ಮಣ(75) ಎಂಬವರು ನ.27ರಂದು ಸಂಜೆ ಉಪ್ಪುಂದ ಜಾತ್ರೆಗೆ ಹೋಗಿ ಬರುವು ದಾಗಿ ಹೇಳಿ ಹೋದವರು ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.