ಉಡುಪಿ: ಸೋದೆ ಪರ್ಯಾಯಕ್ಕೆ ಬಾಳೆ ಮುಹೂರ್ತ
ಉಡುಪಿ: 2028ರ ಜ.18ರಂದು ಎರಡನೇ ಬಾರಿಗೆ ಉಡುಪಿ ಶ್ರೀಕೃಷ್ಣನ ಪೂಜಾ ಕೈಂಕರ್ಯಕ್ಕಾಗಿ ಪರ್ಯಾಯ ಪೀಠಾರೋಹಣ ಮಾಡಲಿರುವ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯ ಪರ್ಯಾಯ ಪೂರ್ವ ಸಿದ್ಧತೆಗಳಲ್ಲಿ ಮೊದಲನೆಯದಾದ ಬಾಳೆ ಮುಹೂರ್ತ ರವಿವಾರ ಇಲ್ಲಿನ ರಥಬೀದಿಯಲ್ಲಿರುವ ಸೋದೆ ಮಠದ ಆವರಣದ ತೋಟದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ನಡೆದ ಬಾಳೆ ಮುಹೂರ್ತದಲ್ಲಿ ಮುಂದಿನ ಪರ್ಯಾಯದ ಅನ್ನ ಸಂತರ್ಪಣೆಗಾಗಿ ಬಾಳೆ ಎಲೆಗಳ ಲಭ್ಯತೆಗಾಗಿ ಬಾಳೆಗಿಡದೊಂದಿಗೆ ಕಬ್ಬು ಹಾಗೂ ತುಳಸಿ ಗಿಡಗಳನ್ನು ನೆಡಲಾಯಿತು.