ಕಾರ್ಕಳ | ಕೆ.ಎಮ್.ಇ.ಎಸ್. ಸಂಸ್ಥೆಯಲ್ಲಿ ವಿಜ್ಞಾನ ಮಾದರಿ ಪ್ರದರ್ಶನ, ವಾಣಿಜ್ಯ ಉತ್ಸವ
ಕಾರ್ಕಳ : ಕಾರ್ಕಳ ಕುಕ್ಕುಂದೂರು ಕೆ.ಎಮ್.ಇ.ಎಸ್. ವಿದ್ಯಾ ಸಂಸ್ಥೆಯಲ್ಲಿ ಇತ್ತೀಚೆಗೆ ಕಾಲೇಜಿನ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ವಿದ್ಯಾರ್ಥಿಗಳು ಕೈಯಿಂದ ತಯಾರಿಸಿದ ವಿಜ್ಞಾನ ಉಪಕರಣಗಳ ಮಾದರಿ ಪ್ರದರ್ಶನ ನಡೆಯಿತು.
ಕಾಲೇಜಿನ ವಿಜ್ಞಾನದ ವಿದ್ಯಾರ್ಥಿ ಮುಹಮ್ಮದ್ ಮುವಾಝ್ ತನ್ನ ಹತ್ತು ಮಂದಿ ವಿದ್ಯಾರ್ಥಿಗಳ ತಂಡದೊಂದಿಗೆ ರಚಿಸಿದ ಮುವತ್ತೊಂದು ಬಗೆ ಬಗೆಯ ವಿಜ್ಞಾನದ ಉಪಕರಣಗಳು ರೋಚಕವಾಗಿ ಕಂಡು ಬಂದಿದ್ದು, ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಇಮ್ತಿಯಾಜ್ ರವರು ಕಾರ್ಯಕ್ರಮವನ್ನು ಉದ್ಗಾಟಿಸುತ್ತಾ"ಕೆ.ಎಂ.ಇ.ಎಸ್ ವಿದ್ಯಾ ಸಂಸ್ಥೆಯು ಸಮಾಜದಲ್ಲಿ ವೈದ್ಯರು, ಇಂಜಿನಿಯರ್ , ಬ್ಯಾಂಕಿನ ಉದ್ಯೋಗಿ, ಐ.ಎ.ಎಸ್, ಐ ಪಿ ಎಸ್ ಆಫಿಸರ್, ವಿಜ್ಞಾನಿ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು,ಮೇಲಾಗಿ ಉತ್ತಮ ವ್ಯಕ್ತಿಗಳ ನಿರ್ಮಾಣವನ್ನುಂಟು ಮಾಡುವಲ್ಲಿ ದಾಪುಗಾಲು ಹಾಕಿಕೊಂಡು ಮುಂದುವರಿಯುತ್ತಿದೆ. ಇಂದು ವಿದ್ಯಾಥಿಗಳು ತಯಾರಿಸಿದ ಮಾದರಿ ಉಪಕರಣಗಳ ಬೆಲೆ ಕಟ್ಟಲು ಸಾಧ್ಯವಿಲ್ಲ. ವಾಣಿಜ್ಯ ಉತ್ಸವದಲ್ಲಿ ನಿರೀಕ್ಷೆಗೆ ಮೀರಿದಷ್ಟು ಸುಮಾರು ಮುವತ್ತೈದಕ್ಕಿಂತ ಹೆಚ್ಚಿನ ಅಂಗಡಿ ಮಳಿಗೆಗಳನ್ನು ರಚಿಸಿ ವ್ಯಾಪಾರ ಮಾಡಿ ವಿದ್ಯಾರ್ಥಿಗಳು ತಮ್ಮ ವ್ಯವಹಾರ ಜ್ಞಾನದ ಪ್ರತಿಭೆಯನ್ನು ಮೆರೆದಿದ್ದಾರೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸ್ಥೆಯು ಪ್ರೋತ್ಸಾಹ ನೀಡುತ್ತಾ ಬಂದಿದೆ" ಎಂದರು.
ಸಂಸ್ಥೆಯ ಪ್ರಿನ್ಸಿಪಾಲ್ ಕೆ. ಬಾಲಕೃಷ್ಣ ರಾವ್ ರವರು ಪ್ರಾಸ್ತವಿಕ ಭಾಷಣ ಮಾಡಿದರು. ಸಂಸ್ಥೆಯ ಕಾರ್ಯನಿರ್ವಾಹಕ ಸಮತಿಯ ಸದಸ್ಯ ಮುಖ್ಯ ಅತಿಥಿಯಾಗಿ ಮುಹಮ್ಮದ್ ನವಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಅತಿಥಿಗಳಾಗಿ ಸಂಸ್ಥೆಯ ಪೂರ್ವ ಶಿಕ್ಷಕಿ ವಿಜಯಲಷ್ಮೀ, ಶಿವಾನಂದ ಶೆಟ್ಟಿ, ಅನುಷಾ ಭಟ್, ಅನಂತೇಶ್ ಅಡಿಗ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲೊಲಿಟ ಡಿ'ಸಿಲ್ವ, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರಿಮತಿ ವೇದಿಕೆಯಲ್ಲಿದ್ದರು.
ಶಿಕ್ಷಕಿ ಶೃತಿ ಸ್ವಾಗತಿಸಿದರು. ಉಪನ್ಯಾಸಕಿ ಪದ್ಮಪ್ರಿಯ ಧನ್ಯವಾದ ಸಮರ್ಪಣೆಗೈದರು. ಉಪನ್ಯಾಸಕಿ ಪೂಜಾ ಕಾರ್ಯಕ್ರಮ ನಿರ್ವಹಿಸಿದರು.