×
Ad

ಕಾಪು: ಕೆನರಾ ಬ್ಯಾಂಕಿನ ಎಟಿಎಂ ಕಳವಿಗೆ ಯತ್ನ; ಪ್ರಕರಣ ದಾಖಲು

Update: 2025-02-12 12:15 IST

ಕಾಪು: ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ನುಗ್ಗಿದ ಮುಸುಕುಧಾರಿ ಕಳ್ಳರು ಕಳವಿಗೆ ಯತ್ನಿಸಿರುವ ಘಟನೆ ಇಂದು ಬೆಳಗಿನ‌ ಜಾವ ಉಡುಪಿಯ ಉದ್ಯಾವರದಲ್ಲಿ ನಡೆದಿದೆ.

ಮೂರು ಮಂದಿ ಮುಸುಕುಧಾರಿ ಕಳ್ಳರು, ಕೆನರಾ ಬ್ಯಾಂಕಿನ‌ ಎಟಿಎಂ ಕೇಂದ್ರಕ್ಕೆ ನುಗ್ಗಿ ಎಟಿಎಂ ಬಾಕ್ಸ್ ಒಡೆಯಲು ಯತ್ನಿಸಿದ್ದಾರೆ. ಈ ವೇಳೆ ಎಟಿಎಂ ನಿಂದ ಸೈರನ್ ಮೊಳಗಿದ್ದು, ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News