×
Ad

ಕೊಲ್ಲೂರು | ಸೌರ್ಪಣಿಕ ನದಿಯಲ್ಲಿ ಕೊಚ್ಚಿಕೊಂಡು ಹೋದ ಬೆಂಗಳೂರು ಮೂಲದ ಮಹಿಳೆ: ಮುಂದುವರೆದ ಹುಡುಕಾಟ

Update: 2025-08-30 12:01 IST

ವಸುಧಾ

ಕೊಲ್ಲೂರು, ಆ.30: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮೀಪದ ಸೌರ್ಪಣಿಕ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿರುವ ಬೆಂಗಳೂರು ಮೂಲದ ಮಹಿಳೆಯ ಹುಡುಕಾಟ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು, ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ನಾಪತ್ತೆಯಾದವರನ್ನು ಬೆಂಗಳೂರಿನ ವಸುಧಾ(46) ಎಂದು ಗುರುತಿಸಲಾಗಿದೆ. ಇವರು ಆಗಾಗ್ಗೆ ಕೊಲ್ಲೂರು ದೇವಳಕ್ಕೆ ಬರುತ್ತಿದ್ದು, ಆ.27ರಂದು ದೇವಸ್ಥಾನಕ್ಕೆ ಆಗಮಿಸಿದ ವಸುಧಾ, ಅಕಸ್ಮಿಕವಾಗಿ ಸೌರ್ಪಣಿಕ ನದಿಯಲ್ಲಿ ಕಾಲು ಜಾರಿ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ನಾಪತ್ತೆಯಾದ ಮಹಿಳೆಗಾಗಿ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಾಗೂ ಅಗ್ನಿಶಾಮಕದಳ ಹುಡುಕಾಟ ನಡೆಸುತ್ತಿದೆ. ನೀರಿನ ರಭಸ ತೀವ್ರವಾಗಿರುವುದರಿಂದ ಹುಡುಕಾಟಕ್ಕೆ ಅಡ್ಡಿಯಾಗುತ್ತಿದೆ. ಆದರೂ, ಕಳೆದ ಎರಡು ದಿನಗಳಿಂದ ಈ ತಂಡ ಹುಡುಕಾಟ ನಡೆಸುತ್ತಿದ್ದು, ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಸ್ಥಳದಲ್ಲಿ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News